ಕಳೆದ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ಯಾಶ್ ರಿಸರ್ವ್ ರೇಶಿಯೋ ದರವನ್ನು ಶೇ.0.75ರಷ್ಟು ಏರಿಕೆ ಮಾಡಿದ ಹಿನ್ನೆಲೆಯಲ್ಲಿ. ದೇಶದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದ ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಥಿರ ಠೇವಣಿಗಳ ಮೇಲೆ ಇಂದು 150 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದೆ.
1 ವರ್ಷದಿಂದ 2ವರ್ಷದವರೆಗಿನ ಸ್ಥಿರ ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್‌ಗಳನ್ನು ಏರಿಕೆ ಮಾಡಿದ್ದು, ಶೇ.6.5ರಷ್ಟು ಬಡ್ಡಿ ದರ ನಿಗದಿಪಡಿಸಿದೆ. 1ವರ್ಷದೊಳಗಿನ ಸ್ಥಿರ ಠೇವಣಿಯ ಬಡ್ಡಿದರದಲ್ಲಿ ಶೇ.6.75ಕ್ಕೆ ಏರಿಕೆ ಮಾಡಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್, 'ಬೆಸ್ಟ್ ಲೋಕಲ್ ಬ್ಯಾಂಕ್ ಆಫ್ ಇಂಡಿಯಾ' ಪ್ರಶಸ್ತಿಗೆ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದು, ಹಿರಿಯ ನಾಗರಿಕರಿಗೆ ಶೇ.0.5ರಷ್ಟು ಬಡ್ಡಿ ದರವನ್ನು ಹೆಚ್ಚುವರಿಯಾಗಿ ನೀಡುವುದಾಗಿ ಘೋಷಿಸಿದೆ.
ದೇಶದ ಮಾರುಕಟ್ಟೆಗಳಲ್ಲಿನ 36 ಸಾವಿರ ಕೋಟಿ ರೂಪಾಯಿ ನಗದು ಹಣದ ಹರಿವನ್ನು ನಿಯಂತ್ರಿಸಲು, ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ತಿಂಗಳು, ಕ್ಯಾಶ್ ರಿಸರ್ವ್ ರೇಶಿಯೋ ಬೇಸಿಸ್ ಪಾಯಿಂಟ್‌ಗಳಲ್ಲಿ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.