ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಉತ್ತೇಜನ ಪ್ಯಾಕೇಜ್ ನಿಧಾನವಾಗಿ ಹಿಂಪಡೆಯುವುದು ಸೂಕ್ತ (Rangarajan|PMEAC|Central Statistical Organisation|Economic Advisory Council)
ಸಾರ್ವತ್ರಿಕ ಬಜೆಟ್ ಮಂಡನೆಗೆ ಕೇವಲ ಒಂದು ವಾರವಿದ್ದಂತೆ ಉತ್ತೇಜನ ಪ್ಯಾಕೇಜ್‌ಗಳನ್ನು ಹಿಂಪಡೆಯುವ ಸರಕಾರದ ನಿಲುವು ಉಹಾಪೋಹಗಳಿಗೆ ಕಾರಣವಾಗಿದೆ. ಉತ್ತೇಜನ ಪ್ಯಾಕೇಜ್‌ಗಳನ್ನು ಹಂತಹಂತವಾಗಿ ಹಿಂದಕ್ಕೆ ಪಡೆಯುವುದು ಸೂಕ್ತ ಎಂದು ಪ್ರಧಾನಮಂತ್ರಿಗಳ ಆರ್ತಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಹೇಳಿದ್ದಾರೆ.
2009-10ರ ಆರ್ಥಿಕ ಪರಿಷ್ಕರಣ ವಿವರಗಳನ್ನು ಬಿಡುಗಡೆಗೊಳಿಸಿದ ರಂಗರಾಜನ್,ದೇಶದ ಆರ್ಥಿಕ ವೃದ್ಧಿ ದರ ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯಕ್ಕೆ ಶೇ.7.2ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆರ್ಥಿಕ ವೃದ್ಧಿ ದರ ಕುಸಿತ ಕಂಡಿದ್ದು,ಜಿಡಿಪಿ ದರ ಹೆಚ್ಚಳಕ್ಕೆ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಂಬರುವ ಬಜೆಟ್‌ನಲ್ಲಿ ಒಂದು ವೇಳೆ ಉತ್ತೇಜನ ಪ್ಯಾಕೇಜ್‌ಗಳನ್ನು ಹಿಂಪಡೆದಲ್ಲಿ, ಚೇತರಿಕೆ ಕಾಣುತತಿರುವ ಕೈಗಾರಿಕೋದ್ಯಮ ಅಭಿವೃದ್ಧಿ ಕುಂಠಿತಗೊಂಡು ಸುಸ್ಥಿತಿಗೆ ಮರಳುತ್ತಿರುವ ಆರ್ಥಿಕತೆಕ್ಕೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎಂದು ಸಿ.ರಂಗರಾಜನ್ ತಿಳಿಸಿದ್ದಾರೆ.