ಉಳಿತಾಯ ಖಾತೆ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಂತಸದ ಸುದ್ದಿಯನ್ನು ತಂದಿದೆ.ಮುಂಬರುವ ಏಪ್ರಿಲ್ ತಿಂಗಳಿನಿಂದ ಉಳಿತಾಯ ಖಾತೆಗಳ ಗ್ರಾಹಕರಿಗೆ ದಿನನಿತ್ಯದ ಆಧಾರದ ಮೇಲೆ ಬಡ್ಡಿಯನ್ನು ನೀಡುವಂತೆ ಆದೇಶಿಸಿದೆ.
ಬ್ಯಾಂಕ್‌ಗಳು ಪ್ರಸಕ್ತ ಅವಧಿಯಲ್ಲಿ ತಿಂಗಳ 11ನೇ ದಿನಾಂಕದಿಂದ ತಿಂಗಳ ಕೊನೆಯ ದಿನದವರೆಗೆ ಬಡ್ಡಿ ದರವನ್ನು ನೀಡುತ್ತಿತ್ತು. ಒಂದು ವೇಳೆ ಗ್ರಾಹಕನು ತಿಂಗಳ ಕೊನೆಯ ದಿನದಂದು ಖಾತೆಯಲ್ಲಿನ ಹಣವನ್ನು ಹಿಂಪಡೆದಲ್ಲಿ ಬಡ್ಡಿಯನ್ನು ಕಳೆದುಕೊಳ್ಳಬೇಕಾಗುತ್ತಿತ್ತು. ಆದರೆ ನೂತನ ನಿಯಮದನ್ವಯ ಗ್ರಾಹಕನು ತಿಂಗಳ ಕೊನೆಯ ದಿನದಂದು ಮೊತ್ತವನ್ನು ಹಿಂಪಡೆದಲ್ಲಿ ಕೂಡಾ, 29 ದಿನಗಳ ಬಡ್ಡಿಯನ್ನು ಪಡೆಯಬಹುದಾಗಿದೆ. ಇದರಿಂದ ಗ್ರಾಹಕರು ಉಳಿತಾಯ ಖಾತೆಯಲ್ಲಿ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದಾಗಿದೆ.
ಮುಂಬರುವ ಏಪ್ರಿಲ್‌ನಿಂದ ಉಳಿತಾಯ ಖಾತೆಯ ಗ್ರಾಹಕರಿಗೆ, ದಿನನಿತ್ಯದ ಆಧಾರದ ಮೇಲೆ ಬಡ್ಡಿಯನ್ನು ನೀಡುವಂತೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮೂಲಗಳು ತಿಳಿಸಿವೆ.
ಆದರೆ ಕೆಲ ಬ್ಯಾಂಕ್‌ಗಳು, ಉಳಿತಾಯ ಖಾತೆಯ ಗ್ರಾಹಕರ ಕನಿಷ್ಠ ಉಳಿತಾಯ ಹಾಗೂ ಠೇವಣಿ ಖಾತೆಗಳಲ್ಲಿ ತಿಂಗಳ ಮೊದಲ ದಿನದಿಂದ ಕೊನೆಯ ದಿನದವರೆಗೆ, ದಿನನಿತ್ಯದ ಆಧಾರದ ಮೇಲೆ ಬಡ್ಡಿ ವಿತರಿಸುವುದು ಸೂಕ್ತ ಎಂದು ಬ್ಯಾಂಕ್‌ಗಳು ಆರ್‌ಬಿಐಗೆ ಸಲಹೆ ನೀಡಿವೆ.
ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಶನ್‌ಗೆ ಅಧಿಸೂಚನೆಯನ್ನು ರವಾನಿಸಲಾಗಿದ್ದು,ಮುಂಬರುವ ಏಪ್ರಿಲ್‌ನಿಂದ ಜಾರಿಗೊಳಿಸಲು ಅನುವಾಗುವಂತೆ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯುವಂತೆ ಅಥವಾ ಮುಂದೂಡುವಂತೆ ಬ್ಯಾಂಕ್‌ಗಳು ಮನವಿ ಮಾಡಿದ್ದು, ಇದರಿಂದ ಬ್ಯಾಂಕ್‌ಗಳ ಲಾಭದಲ್ಲಿ ಕುಸಿತವಾಗಲಿದೆ ಎಂದು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಅಧ್ಯಕ್ಷ ಎಂ.ವಿ.ನಾಯರ್ ತಿಳಿಸಿದ್ದಾರೆ.
ಆದಾಗ್ಯೂ, ಬ್ಯಾಂಕ್‌ಗಳು ಉಳಿತಾಯ ಖಾತೆಗಳ ಮೇಲೆ ಶೇ.3.5ರಷ್ಟು ಬಡ್ಡಿ ದರವನ್ನು ನೀಡಿ, ನೂತನ ನಿಯಮಗಳನ್ನು ಜಾರಿಗೊಳಿಸುವಂತೆ ಆದೇಶಿಸಿದೆ.