ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಗತ್ಯವಾದಲ್ಲಿ ಭತ್ತ ಅಮುದಿಗೆ ಸರಕಾರ ಬದ್ಧ:ರಂಗರಾಜನ್ (Import rice | Government | PMEAC | EGoM)
Bookmark and Share Feedback Print
 
ಪ್ರಸಕ್ತ ಋತುವಿನಲ್ಲಿ ಭತ್ತದ ಉತ್ಪಾದನೆ 27 ಮಿಲಿಯನ್ ಟನ್‌ಗಳಿಗಿಂತ ಕಡಿಮೆಯಾದಲ್ಲಿ, ಅಮುದು ಮಾಡಿಕೊಳ್ಳುವ ಬಗ್ಗೆ ಸರಕಾರ ಪರಿಗಣಿಸಬೇಕಾಗುತ್ತದೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಹೇಳಿಕೆ ನೀಡಿದೆ.

ಕಳೆದ ವರಷದ ನವೆಂಬರ್ ತಿಂಗಳ ಅವಧಿಯಲ್ಲಿ ಅಧಿಕಾರ ಹೊಂದಿದ ಸಚಿವರ ಸಭೆ, ಕೇಂದ್ರದಲ್ಲಿ ಭತ್ತದ ದಾಸ್ತಾನು ಸಂಗ್ರಹ ವಿಪುಲವಾಗಿರುವುದರಿಂದ ಭತ್ತ ಅಮುದು ನಿರ್ಧಾರವನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿತ್ತು.

ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ, ಇಲ್ಲಿಯವರೆಗೆ 22.2 ಮಿಲಿಯನ್ ಟನ್ ಭತ್ತ ಸಂಗ್ರಹಿಸಿದ್ದು, ಕಳೆದ ವರ್ಷದ ಅವಧಿಯಲ್ಲಿ 23.1ಮಿಲಿಯನ್ ಟನ್‌ಗಳಷ್ಟು ಭತ್ತ ಸಂಗ್ರಹವಾಗಿತ್ತು.

ದೇಶಕ್ಕೆ 2009-10ರ ಅಕ್ಟೋಬರ್‌ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ 26 ಮಿಲಿಯನ್ ಟನ್ ಭತ್ತದ ಸಂಗ್ರಹ ಅಗತ್ಯವಾಗಿತ್ತು.ಆದರೆ 2010-11ರಲ್ಲಿ 27 ಮಿಲಿಯನ್ ಟನ್ ಭತ್ತ ಸಂಗ್ರಹ ಅಗತ್ಯವಾಗಿದೆ ಎಂದು ಸಿ.ರಂಗರಾಜನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ