ಜಾಗತಿಕ ಮಾರುಕಟ್ಟೆಯ ಪ್ರಬಲ ವಹಿವಾಟಿನಿಂದಾಗಿ ಚಿನ್ನದ ದರದಲ್ಲಿ 190 ರೂಪಾಯಿಗಳ ಏರಿಕೆಯಾಗಿ, ಪ್ರತಿ 10ಗ್ರಾಂ ಚಿನ್ನಕ್ಕೆ 17,000 ರೂಪಾಯಿಗಳಿಗೆ ತಲುಪಿದೆ.
ಸ್ಟ್ಯಾಂಡರ್ಡ್ ಚಿನ್ನ ಹಾಗೂ ಆಭರಣಗಳ ದರಗಳಲ್ಲಿ ತಲಾ 190 ರೂಪಾಯಿಗಳ ಏರಿಕೆಯಾಗಿ, ತಿಂಗಳ ಗರಿಷ್ಠ 17,050 ಮತ್ತು 16,900 ರೂಪಾಯಿಗಳಿಗೆ ತಲುಪಿದೆ.
ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಸುರಕ್ಷಿತ ಪರ್ಯಾಯ ಹೂಡಿಕೆಯಾದ ಚಿನ್ನದ ದರ, ಪ್ರತಿ ಔನ್ಸ್‌ಗೆ 1,126.70 ಡಾಲರ್‌ಗಳಿಗೆ ಏರಿಕೆ ಕಂಡಿದೆ. ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ ದರದಲ್ಲಿ ಹೆಚ್ಚಳವಾಗಿದೆ ಎಂದು ವಹಿವಾಟುದಾರರು ತಿಳಿಸಿದ್ದಾರೆ.
ಬೆಳ್ಳಿಯ ದರದಲ್ಲಿ ಕೂಡಾ, ಪ್ರತಿ ಕೆಜಿಗೆ 700 ರೂಪಾಯಿಗಳಷ್ಟು ಏರಿಕೆಯಾಗಿ, 25,750 ರೂಪಾಯಿಗಳಿಗೆ ತಲುಪಿದೆ.ಬೆಳ್ಳಿಯ ನಾಣ್ಯದ ದರದಲ್ಲಿ ಕೂಡಾ, 200 ರೂಪಾಯಿಗಳ ಏರಿಕೆಯಾಗಿ 33,300 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಚಿನಿವಾರ ಪೇಟೆಯ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ, ಚಿನ್ನದ ದರ ಪ್ರತಿ 10ಗ್ರಾಂಗೆ 60 ರೂಪಾಯಿ ಏರಿಕೆ ಕಂಡು 16,750 ರೂಪಾಯಿಗಳಿಗೆ ತಲುಪಿತ್ತು.