ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಕ್ಕರೆ, ಗೋಧಿ, ಮೈದಾ ಕ್ವಿಂಟಾಲ್‌ಗೆ ಮತ್ತೆ 50ರೂ.ಏರಿಕೆ (sugar | wheat | maida | sooji | Chennai | commodities)
Bookmark and Share Feedback Print
 
ಆಹಾರೋತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಸಕ್ಕರೆ, ಗೋಧಿ, ಮೈದಾ ಬೆಲೆ ಮತ್ತಷ್ಟು ಏರಿಕೆ ಕಂಡಿದ್ದು, ಉಳಿದ ಉತ್ಪನ್ನಗಳ ಬೆಲೆ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಸಕ್ಕರೆ ಕ್ವಿಂಟಾಲ್‌ಗೆ ಪ್ರಸಕ್ತವಾಗಿ 3,700ರೂ. ಇದ್ದು, ಅದೀಗ 3,750ರೂ.ಗೆ ಏರಿದ್ದು, ಗೋಧಿ ಕ್ವಿಂಟಾಲ್‌ಗೆ 1,850ರಿಂದ 1900ರೂ.ಗೆ ಹೆಚ್ಚಳವಾಗಿದೆ. ಅದೇ ರೀತಿ ಮೈದಾ ಕ್ವಿಂಟಾಲ್‌ಗೆ 1700ರೂ.ರಿಂದ 1750ರೂ.ಗೆ ಹಾಗೂ ರವೆ ಕ್ವಿಂಟಾಲ್‌ಗೆ 1800ರೂ.ನಿಂದ 1850ರೂ.ಗೆ ಏರಿಕೆಯಾಗಿದೆ.

ಉಳಿದಂತೆ ಉದ್ದಿನ ಬೇಳೆ, ತೊಗರಿಬೇಳೆ ಹಾಗೂ ಇನ್ನಿತರ ಸಾಂಬಾರು ಪದಾರ್ಥಗಳ ಬೆಲೆ ಈ ಹಿಂದಿನ ಮಾರುಕಟ್ಟೆ ದರದಂತೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ