ಕುವೈಟ್ ಮೂಲದ ಝೈನ್ ಟೆಲಿಕಾಂ ಮತ್ತು ಆಫ್ರಿಕನ್ ಆಸ್ತಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಭಾರತದ ಅನುಮತಿಯ ಅಗತ್ಯವಿಲ್ಲ ಎಂದಿರುವ ಭಾರ್ತಿ ಏರ್‌ಟೆಲ್ ಅಧ್ಯಕ್ಷ ಸುನೀಲ್ ಮಿತ್ತಲ್ ತಿಳಿಸಿದ್ದು, ಈ ಒಪ್ಪಂದ ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇರುವುದಾಗಿ ಹೇಳಿದ್ದಾರೆ.
ಈ ಒಪ್ಪಂದ ಶೀಘ್ರವಾಗಿ ನಡೆಯಲಿದ್ದು, ನನ್ನ ಎಣಿಕೆಯ ಪ್ರಕಾರ ಬಹುತೇಕ ಏಪ್ರಿಲ್ ಅಂತ್ಯದೊಳಗೆ ಮುಕ್ತಾಯಗೊಳ್ಳಲಿದೆ ಎಂದು ಮಿತ್ತಲ್ ಅವರು ಬ್ಯುಸಿನೆಸ್ ನ್ಯೂಸ್ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.
ಬಹುಕೋಟಿ ಆಸ್ತಿ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಅನುಮತಿಗಾಗಿ ಎದುರು ನೋಡುತ್ತಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ನಾವು ಕೇವಲ ಭಾರತದ ಆಶೀರ್ವಾದವನ್ನಷ್ಟೇ ಎದುರು ನೋಡುತ್ತೇವೆ ವಿನಃ, ಯಾವುದೇ ಅನುಮತಿಯನ್ನಲ್ಲ ಎಂದರು. ಅಲ್ಲದೇ ಇದೊಂದು ಮಹತ್ವದ ಒಪ್ಪಂದವಾಗಿದೆ ಎಂದು ಹೇಳಿದರು.