ವಿದೇಶಿ ವಿನಿಮಯ ಸೇವೆಯನ್ನು ನೀಡುವ ವಾಲ್‌ಸ್ಟ್ರೀಟ್ ಫೈನಾನ್ಸ್ ಲಿಮಿಟೆಡ್‌ಗೆ, ರಾಜೀವ್ ಮಹೇಶ್ವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜೀವ್ ಮಹೇಶ್ವರಿ ಕಂಪೆನಿಗೆ ಸೇರ್ಪಡೆಯಾಗುವ ಮೊದಲು, ಕೊಟ್ಯಾಕ್ ಮಹೀಂದ್ರಾ ಬ್ಯಾಂಕ್‌ನ ಆಸೆಟ್ ರಿಕನ್ಸಟ್ರಕ್ಷನ್ ವಿಭಾಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವಾಲ್‌ಸ್ಟ್ರೀಟ್ ಫೈನಾನ್ಸ್, ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಪಂಗಪಡಿಸಿದೆ.
ವಾಲ್‌ಸ್ಟ್ರೀಟ್ ಫೈನಾನ್ಸ್ ಕಂಪೆನಿ, ಭಾರತದಲ್ಲಿ ವಿದೇಶಿ ವಿನಿಮಯ ಸೇವೆಯನ್ನು ನೀಡುತ್ತಿದೆ.ವೆಸ್ಟರ್ನ್ ಯುನಿಯನ್ ಮನಿ ಟ್ರಾನ್ಸ್‌ಫರ್‌ನ ಜಂಟಿ ಸಹಭಾಗಿತ್ವದಲ್ಲಿ ವಿಶ್ವದಾದ್ಯಂತ 3,500 ಸ್ಥಳಗಳಲ್ಲಿ ಕಚೇರಿಗಳನ್ನು ಹೊಂದಿದೆ.
ಕಳೆದ ವಾರ ಭೂಪೆಂದ್ರಾ ಕುಮಾರ್, ಅಡಳಿತ ಮಂಡಳಿಯ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಅವರ ಸ್ಥಾನಕ್ಕೆ ಬಿ.ಕೆ.ಮೋದಿಯವರನ್ನು ನೇಮಕ ಮಾಡಲಾಗಿದೆ ಎಂದು ಕಂಪೆನಿ, ಮುಂಬೈ ಶೇರುಪೇಟೆಗೆ ಮಾಹಿತಿ ಸಲ್ಲಿಸಿದೆ.