ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬೆಲೆ ಏರಿಕೆ ನಿಯಂತ್ರಣ ಸರಕಾರದ ಪ್ರಥಮ ಆದ್ಯತೆ:ಪಾಟೀಲ್ (Budget Session | President Patil| Price rise)
Bookmark and Share Feedback Print
 
ಅಹಾರ ದರ ಏರಿಕೆಯ ಹಣದುಬ್ಬರವನ್ನು ನಿಯಂತ್ರಿಸಿ, ಜನಸಾಮನ್ಯರಿಗೆ ಪರಿಹಾರವನ್ನು ನೀಡುವುದು ತಮ್ಮ ಸರಕಾರದ ಮೊದಲ ಆದ್ಯತೆಯಾಗಿದೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹೇಳಿದ್ದಾರೆ.

ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾತನಾಡಿದ ರಾಷ್ಟ್ರಪತಿ ಪಾಟೀಲ್, ಆರ್ಥಿಕ ಬಿಕ್ಕಟ್ಟು ಹಾಗೂ ಮುಂಗಾರು ವೈಫಲ್ಯದಿಂದ ಸಂಕಷ್ಟವನ್ನು ಎದುರಿಸುತ್ತಿರುವ ಜನಸಾಮಾನ್ಯರ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ, ದ್ವಿದಳ ಧಾನ್ಯ ಮತ್ತು ಭತ್ತದ ದರಗಳಲ್ಲಿ ಏರಿಕೆ ಹಾಗೂ ದೇಶದಲ್ಲಿ ಅಹಾರ ಉತ್ಪನ್ನಗಳ ಕೊರತೆ, ನಿರಂತರ ಏರಿಕೆ ಕಾಣುತ್ತಿರುವ ಅಹಾರ ದರಗಳನ್ನು ನಿಯಂತ್ರಿಸಿ, ಜನಸಾಮಾನ್ಯರಿಗೆ ನೆಮ್ಮದಿಯನ್ನು ಒದಗಿಸುವ ಕಾರ್ಯಕ್ಕೆ ತಮ್ಮ ಸರಕಾರ ಗರಿಷ್ಠ ಮಹತ್ವ ನೀಡಲಿದೆ ಎಂದು ತಿಳಿಸಿದ್ದಾರೆ.

ಡಿಸೆಂಬರ್‌ಗೆ ಮಾಸಾಂತ್ಯಗೊಂಡಂತೆ ಅಹಾರ ಹಣದುಬ್ಬರ ದರ ಶೇ.20ರಷ್ಟು ಏರಿಕೆ ಕಂಡಿದ್ದು, ಫೆಬ್ರವರಿ 18ಕ್ಕೆ ವಾರಂತ್ಯಗೊಂಡಂತೆ ಅಲ್ಪಮಟ್ಟಿನ ಇಳಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ