ಭಾರತೀಯ ರಿಸರ್ವ್ ಬ್ಯಾಂಕ್ ವಾರ್ಷಿಕ ಹಣದುಬ್ಬರ ದರ ಶೇ.8.5ಕ್ಕೆ ತಲುಪಲಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದ್ದು, ಹಣದುಬ್ಬರ ಏರಿಕೆಯಿಂದ ದೇಶದ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಸ್ಟ್ಯಾಂಡರ್ಡ್ ಆಂಡ್ ಪೂರ್ ಅಧ್ಯಯನ ಸಮೀಕ್ಷಾ ಸಂಸ್ಥೆ ಹೇಳಿಕೆ ನೀಡಿದೆ.
ದೇಶದ ಆರ್ಥಿಕತೆ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದರೆ ಚೇತರಿಕೆಯ ಹಂತದಲ್ಲಿದೆ. ಪ್ರಸ್ತುತ ಆರ್ಥಿಕತೆಯ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಎಸ್‌ಆಂಡ್ ಪಿ ಆಂಡ್ ಐಪಿಎಫ್ ರೇಟಿಂಗ್ಸ್ ನಿರ್ದೇಶಕ ಟಿಕೆ ಒಗಾವಾ ತಿಳಿಸಿದ್ದಾರೆ.
ಏತನ್ಮಧ್ಯೆ, ವಾರ್,ಿಕ ಹಣದುಬ್ಬರ ದರ ಏರಿಕೆಯ ಮುಂದುವರಿದಲ್ಲಿ ದೇಶದ ಆರ್ಥಿಕ ವೃದ್ಧಿ ದರದಲ್ಲಿ ಕುಸಿತವಾಗಲಿದೆ.ಕೇಂದ್ರ ಸರಕಾರ ಶೇ.6.8ರಷ್ಟು ಜಿಡಿಪಿ ದರಕ್ಕೆ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಜನೆವರಿ ತಿಂಗಳಲ್ಲಿ ಸಗಟು ಸೂಚ್ಯಂಕ ದರ ಶೇ.8.56ರಷ್ಟಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್,ಅಹಾರ ಹಣದುಬ್ಬರ ದರ ಶೇ.8.5ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಅಂದಾಜು ಸಮೀಕ್ಷೆಯನ್ನು ಪ್ರಕಟಿಸಿದೆ.