ಕೊಯಿಮುತ್ತೂರ್, ಸೋಮವಾರ, 22 ಫೆಬ್ರವರಿ 2010( 19:03 IST )
ಹೊಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಲಿಮಿಟೆಡ್ ಕಂಪೆನಿ 'ಸಿಬಿ ಟ್ವಿಸ್ಟರ್' ಎನ್ನುವ ಮಾಡೆಲ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಪ್ರಸಕ್ತ ವರ್ಷದಲ್ಲಿ 15 ಲಕ್ಷ ವಾಹನಗಳನ್ನು ಮಾರಾಟವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ 2008-09ರ ಅವಧಿಯಲ್ಲಿ 10 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಆಕ್ಟಿವಾ,ಡಿಯೊ ಮತ್ತು ಅವಿಯೇಟರ್ ವಾಹನಗಳ ಮಾರಾಟದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದ್ದು, ಒಟ್ಟು 15 ಲಕ್ಷ ದ್ವಿಚಕ್ರವಾಹನಗಳ ಮಾರಾಟದ ಗುರಿಯನ್ನು ಹೊಂದಲಾಗಿದೆ ಎಂದು ಕಂಪೆನಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಶೇ.13ರಷ್ಟು ಪಾಲನ್ನು ಹೊಂದಿರುವ ಹೊಂಡಾ ಸಂಸ್ಥೆ, 110 ಸಿಸಿ 'ಸಿಬಿ ಟ್ವಿಸ್ಟರ್' ದ್ವಿಚಕ್ರವಾಹನಗಳನ್ನು ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಮಾಸಾಂತ್ಯದ ವೇಳೆಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಭಾರತದ, ತಮಿಳುನಾಡಿನಲ್ಲಿ ಶೇ.9ರಷ್ಟು ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಶೇ.9ರಷ್ಟು ಪಾಲನ್ನು ಹೊಂದಿದೆ ಎಂದು ಕಂಪೆನಿಯ ಸಲಹೆಗಾರರಾದ ಡಬ್ಲೂ.ಐವಾಯಾಮಾ ತಿಳಿಸಿದ್ದಾರೆ.
ಹೊಂಡಾ ಕಂಪೆನಿ ಸಿಬಿಎಫ್ ಸ್ಟನ್ನರ್ ಮತ್ತು ನ್ಯೂ ಡಿಯೊ ನೂತನ ಮಾಡೆಲ್ ದ್ವಿಚಕ್ರ ವಾಹನಗಳನ್ನು ಕೂಡಾ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.