ಬಹುದಿನಗಳಿಂದ ನೆನೆಗುದಿಯಲ್ಲಿರುವ ಬಹುನಿರೀಕ್ಷಿತ 3ಜಿ ತರಂಗಾಂತರ ಹರಾಜಿಗಾಗಿ ಬಿಡ್ಗಳ ಅಹ್ವಾನಕ್ಕಾಗಿ ಅಧಿಕೃತ ಸೂಚನೆಯನ್ನು ಒಂದು ವಾರದೊಳಗೆ ಹೊರಡಿಸಲಾಗುವುದು ಎಂದು ಕೇಂದ್ರದ ಟೆಲಿಕಾಂ ಖಾತೆ ಸಚಿವ ಎ.ರಾಜಾ ಹೇಳಿದ್ದಾರೆ.
ಅಧಿಕೃತ ಸೂಚನೆ ಹೊರಡಿಸಿದ ನಂತರ ಮುಂಬರುವ 40-45 ದಿನಗಳೊಳಗಾಗಿ ಹರಾಜು ನಡೆಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಟೆಲಿಕಾಂ ಕಂಪೆನಿಗಳಿಗೆ 3ಜಿ ತರಂಗಾಂತರಗಳ ಹರಾಜು ಬಿಕ್ಕಟ್ಟು, ಪ್ರಸಕ್ತ ವಾರದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಗಳಿವೆ ಎಂದು ಟೆಲಿಕಾಂ ಖಾತೆ ಸಚಿವ ಎ.ರಾಜಾ ಹೇಳಿದ್ದಾರೆ.
3ಜಿ ತರಂಗಾಂತರಗಳ ಕುರಿತಂತೆ ವಿತ್ತ ಹಾಗೂ ಕಾನೂನು ಸಚಿವಾಲಯ ಒಂದು ವೇಳೆ ಅನುಮತಿ ನೀಡಿದಲ್ಲಿ, ಪ್ರಸಕ್ತ ವಾರದಲ್ಲಿ ಎಲ್ಲಾ ಬಿಕ್ಕಟ್ಟುಗಳು ಸಂಪೂರ್ಣವಾಗಿ ಇತ್ಯರ್ಥಗೊಳ್ಳಲಿವೆ ಎಂದು ತಿಳಿಸಿದ್ದಾರೆ.