ದಶಕದ ಅವಧಿಯಲ್ಲಿ 10 ಲಕ್ಷ ಕಾರುಗಳ ರಫ್ತು ಗುರಿಯನ್ನು ತಲುಪಲಾಗಿದೆ ಎಂದು ದೇಶದ ಕಾರು ತಯಾರಿಕೆ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿರುವ ಹುಂಡೈ ಮೋಟಾರ್ ಇಂಡಿಯಾ ಹೇಳಿಕೆ ನೀಡಿದೆ.
ಹುಂಡೈ ಮೋಟಾರ್ ಕಂಪೆನಿ 1999ರಲ್ಲಿ 760 ಅಸೆಂಟ್ ಮಾಡೆಲ್‌ನೊಂದಿಗೆ ರಫ್ತು ವಹಿವಾಟು ಆರಂಭಿಸಿದ್ದು,2000ರಲ್ಲಿ ಸ್ಯಾಂಟ್ರೋ ಕಾರನ್ನು ಅಲ್ಗೇರಿಯಾಗೆ ರಫ್ತು ಮಾಡುವಲ್ಲಿ ಯಶಸ್ವಿಯಾಗಿತ್ತು. 2004ರ ಅವಧಿಯಲ್ಲಿ 1 ಲಕ್ಷ ಕಾರುಗಳ ರಫ್ಚು ಗುರಿಯನ್ನು ಸಾಧಿಸಿತ್ತು ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ಡಬ್ಲೂ ಪಾರ್ಕ್ ತಿಳಿಸಿದ್ದಾರೆ.
2005ರಲ್ಲಿ, ಹುಂಡೈ ರಫ್ತು ವಹಿವಾಟು ಎರಡು ಲಕ್ಷ ಕಾರುಗಳನ್ನು ರಫ್ತು ಮಾಡಿತ್ತು. ನಂತರದ ವರ್ಷದಲ್ಲಿ ಮೂರು ಲಕ್ಷ ಗುರಿಗೆ ತಲುಪಿತ್ತು.
2008ರಲ್ಲಿ ಹುಂಡೈ ಕಂಪೆನಿ ಇಂಗ್ಲೆಂಡ್, ಎಚ್‌ಎಂಐಎಲ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಸುಮಾರು ಐದು ಲಕ್ಷ ಕಾರುಗಳನ್ನು ರಫ್ತು ಗುರಿಯನ್ನು ಸಾಧಿಸಿ ಭರ್ಜರಿ ವಹಿವಾಟು ನಡೆಸಿತ್ತು.
ಕಂಪೆನಿಯ ರಫ್ತು ವಹಿವಾಟಿನಲ್ಲಿ ಇದೊಂದು ಮೈಲಿಗಲ್ಲು ಎಂದು ಕೈಗಾರಿಕೋದ್ಯಮ ಇಲಾಖೆಯ ಕಾರ್ಯದರ್ಶಿ ರಾಜೀವ್ ರಂಜನ್ ಸಂತಸ ವ್ಯಕ್ತಪಡಿಸಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಾರುಗಳ ರಫ್ತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮುಂಬರುವ ಬಜೆಟ್‌ನಲ್ಲಿ ಸರಕಾರ ಉತ್ತೇಜನ ಪ್ಯಾಕೇಜ್‌ಗಳನ್ನು ಹಿಂದಕ್ಕೆ ಪಡೆದಲ್ಲಿ, ರಫ್ತು ವಹಿವಾಟು ಕುಸಿತಗೊಳ್ಳುವ ಸಾಧ್ಯತೆಗಳಿರುವುದರಿಂದ ಸರಕಾರ ಉತ್ತೇಜನ ಪ್ಯಾಕೇಜ್‌ಗಳನ್ನು ಮುಂದುವರಿಸುವಂತೆ ಮನವಿ ಮಾಡಲಾಗುವುದು ಎಂದು ಕೇಂದ್ರ ಕೈಗಿರೋಕ್ದಯಮ ಕಾರ್ಯದರ್ಶಿ ಸೆಕ್ಸೆನಾ ಹೇಳಿದ್ದಾರೆ.