ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೂಲ ಬಡ್ಡಿ ದರ ಹೆಚ್ಚಿಸಲು ಎಸ್‌ಬಿಐ ನಿರ್ಧಾರ:ಭಟ್ (SBI | Base rate | BPLR | OP Bhatt)
Bookmark and Share Feedback Print
 
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ,ಮೂಲ ಬಡ್ಡಿ ದರವನ್ನು ಶೇ.8ರ ಸುಮಾರಿಗೆ ಸ್ತಿರಗೊಳಿಸುವ ಉದ್ದೇಶ ಹೊಂದಿದೆ ಎಂದು ಬ್ಯಾಂಕ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲ ಬಡ್ಡಿದರವನ್ನು ಸುಮಾರು ಶೇ.8ರೊಳಗೆ ಸ್ಥಿರಗೊಳಿಸಲು ನಿರ್ಧರಿಸಲಾಗಿದೆ ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ತಿಳಿಸಿದ್ದಾರೆ.

ಮುಂಬರುವ ಏಪ್ರಿಲ್‌ನಿಂದ ಪ್ರೈಮ್ ಲೆಂಡಿಂಗ್ ದರಗಳ ಮೂಲದರವನ್ನು ಹೆಚ್ಚಿಸುವ ಉದ್ದೇಶದ ಹಿನ್ನೆಲೆಯಲ್ಲಿ ಮೂಲದರಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಭಟ್ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಉದ್ದೇಶಿಸಲಾದ ಮೂಲ ದರ ವ್ಯವಸ್ಥೆ ಬದಲಾವಣೆಯ ಬಗ್ಗೆ ,ಎಸ್‌ಬಿಐ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು,ನಂತರ ಬ್ಯಾಂಕ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಎಸ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂದೋರ್‌ನೊಂದಿಗೆ ವೀಲಿನ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್, ಮಾರ್ಚ್ ಅಂತ್ಯಕ್ಕೆ ಉಭಯ ಬ್ಯಾಂಕ್‌ಗಳು ವಿಲಿನಗೊಳ್ಳಲಿವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ