ಗೋದ್ರೇಜ್ ಗ್ರಾಹಕ ಉತ್ಪನ್ನ ಸಂಸ್ಥೆ ಮುಂಬರುವ ಏಪ್ರಿಲ್ ತಿಂಗಳಲ್ಲಿ ಕೆಲ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಪರ್ಸನಲ್ ಕೇರ್ ಪ್ರೋಡಕ್ಟ್ಸ್ ಹೇರ್ ಕೇರ್ ಸ್ಪೇಸ್ ಮತ್ತು ಹೌಸ್‌ಹೋಲ್ಡ್ ಉತ್ಪನ್ನಗಳ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕೆಲ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಯೋಜನೆಗಳನ್ನು ರೂಪಿಸಿದ್ದು, ಏಪ್ರಿಲ್ ತಿಂಗಳಲ್ಲಿ ಘೋಷಿಸಿಲಾಗುವುದು ಎಂದು ಗೊದ್ರೇಜ್ ಕಂಪೆನಿ ಮುಖ್ಯಸ್ಥ ಆದಿ ಗೊದ್ರೆಜ್ ತಿಳಿಸಿದ್ದಾರೆ.
ಕಂಪೆನಿಯ ಜಾಹೀರಾತು ವೆಚ್ಚವನ್ನು ಶೇ.25ರಷ್ಟು ಏರಿಕೆ ಮಾಡಲು ನಿರ್ಧರಿಸಿದ್ದು,ಆದರೆ ಉತ್ಪನ್ನಗಳ ದರ ಏರಿಕೆ ಮಾಡುವ ಉದ್ದೇಶವಿಲ್ಲ ಎಂದು ಆದಿ ಗೊದ್ರೇಜ್ ತಿಳಿಸಿದ್ದಾರೆ.
ಬಹುತೇಕ ನಮ್ಮ ಯೋಜನೆಗಳು ಭೂಮಾಲೀಕರೊಂದಿಗೆ ಜಂಟಿ ಸಹಭಾಗಿತ್ವದಲ್ಲಿವೆ. ಲಾಭ ಹಂಚಿಕೆ ಅಥವಾ ಭೂಮಿ ಅಥವಾ ಆದಾಯವನ್ನು ಹಂಚಿಕೊಂಡು ಕಾರ್ಯನಿರ್ವಹಿಸಲಾಗುತ್ತದೆ.ಈಗಾಗಲೇ 15 ಜಂಟಿ ಸಹಭಾಗಿತ್ವದ ಘಟಕಗಳಿದ್ದು, 15 ಘಟಕಗಳನ್ನು ವಿಸ್ತರಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಆದಿ ಗೊದ್ರೇಜ್ ತಿಳಿಸಿದ್ದಾರೆ.