ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಜೆಟ್ : ಪ್ರಯಾಣಿಕ ದರ ಹೆಚ್ಚಳವಿಲ್ಲ, ಸರಕು ದರ ಹೆಚ್ಚಳ ಸಾಧ್ಯತೆ (Union Rail Minister | Mamata Banerjee | Passenger fares | Freight tariff)
ಬಜೆಟ್ : ಪ್ರಯಾಣಿಕ ದರ ಹೆಚ್ಚಳವಿಲ್ಲ, ಸರಕು ದರ ಹೆಚ್ಚಳ ಸಾಧ್ಯತೆ
ನವದೆಹಲಿ, ಮಂಗಳವಾರ, 23 ಫೆಬ್ರವರಿ 2010( 17:04 IST )
PTI
ಕೇಂದ್ರದ ರೈಲ್ವೆ ಖಾತೆ ಸಚಿವ ಮಮತಾ ಬ್ಯಾನರ್ಜಿ, ಮುಂಬರುವ ಆರ್ಥಿಕ ಸಾಲಿನ ಬಜೆಟ್ ನಾಳೆ ಮಂಡಿಸಲಿದ್ದು, ಪ್ರಯಾಣಿಕ ದರವನ್ನು ಹೆಚ್ಚಿಸದೆ, ಸರಕು ಸಾಗಾಣೆ ದರದಲ್ಲಿ ಹೆಚ್ಚಳ ಮಾಡುವ ಸಾಧ್ಯತೆಗಳಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಮುಂದಿನ ವರ್ಷದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಜನತೆಗೆ ಕೊಡುಗೆಯನ್ನು ನೀಡಲು ನೂತನ ರೈಲ್ವೆ ಮಾರ್ಗಗಳು ಹಾಗೂ ರೈಲ್ವೆ ಸಂಖ್ಯೆಗಳನ್ನು ಹೆಚ್ಚಿಸಿ ಜನರ ಮನವನ್ನು ಸೆಳೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೈಲ್ವೆ ಇಲಾಖೆ ಲಾಭದತ್ತ ಮರಳಿರುವುದರಿಂದ, ರೈಲ್ವೆ ಸಚಿವೆ ಬ್ಯಾನರ್ಜಿಹೆಚ್ಚಿನ ಒತ್ತಡವನ್ನು ಎದುರಿಸುತ್ತಿಲ್ಲ.ವಿಶ್ವದ ಎರಡನೇ ಬೃಹತ್, ಏಕೈಕ ವ್ಯವಸ್ಥಾಪನಾ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ಇಲಾಖೆ ಪ್ರತಿನಿತ್ಯ 108,706 ಕಿ.ಮಿ. ದೂರವನ್ನು 7000 ರೈಲುಗಳು 14 ಮಿಲಿಯನ್ ಪ್ರಯಾಣಿಕರನ್ನು ಸಾಗಿಸುತ್ತಿವೆ. ಸುಮಾರು 6906 ರೈಲ್ವೆ ನಿಲ್ದಾಣಗಳನ್ನು ಹಾದು ಹೋಗುವ ರೈಲುಗಳು ಹಾಗೂ 4000 ಸರಕು ಸಾಗಾಣೆ ರೈಲುಗಳು 850 ಮಿಲಿಯನ್ ಟನ್ ಸರಕನ್ನು ಸಾಗಿಸುತ್ತಿವೆ.
ರೈಲ್ವೆ ಸಚಿವಾಲಯದ ಪ್ರಕಾರ, ಪ್ರಸಕ್ತ ಆರ್ಥಿಕ ವರ್ಷದ ಆರಂಬಿಕ 10 ತಿಂಗಳ ಅವಧಿಯಲ್ಲಿ ನಿವ್ವಳ ಲಾಭದಲ್ಲಿ ಶೇ.8.6ರಷ್ಟು ಏರಿಕೆಯಾಗಿ 70,501.65 ಕೋಟಿ ರೂಪಾಯಿಗಳಿಗೆ ತಲುಪಿದೆ.ಕಳೆದ ವರ್ಷದ ಅವಧಿಯಲ್ಲಿ 64943.32ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿತ್ತು.
ಜಾಗತಿಕ ಆರ್ಥಿಕ ಕುಸಿತ ಮಧ್ಯೆಯು ಒಟ್ಟು ಸರಕು ಸಾಗಾಣೆ ನಿವ್ವಳ ಲಾಭದಲ್ಲಿ ಶೇ.8.47ರಷ್ಟು ಏರಿಕೆಯಾಗಿದ್ದು, ಒಟ್ಟು ಪ್ರಯಾಣಿಕ ಆದಾಯದಲ್ಲಿ ಶೇ.7.40ರಷ್ಟು ಏರಿಕೆಯಾಗಿದೆ.
PTI
'ವಿಜನ್ 2020' ಎನ್ನುವ ದೂರದೃಷ್ಟಿಯೊಂದಿಗೆ 30,000 ಕಿ.ಮಿ. ನೂತನ ಮಾರ್ಗವನ್ನು ಬಹು ಲೈನ್‌ಗಳಾಗಿ ಪರಿವರ್ತಿಸುವ ಯೋಜನೆಯಿದ್ದು, ಸುಮಾರು 33000 ಕಿ.ಮಿ. ದೂರವನ್ನು ವಿದ್ಯುತ್‌ಚಾಲಿತ ಮಾರ್ಗವನ್ನಾಗಿಸಲು ಯೋಜನೆಗಳ್ನು ರೂಪಿಸಲಾಗಿದೆ.
ರೈಲ್ವೆ ಸಚಿವಾಲಯದ ಮೂಲಗಳ ಪ್ರಕಾರ, ದೆಹಲಿ-ಕೋಲ್ಕತಾ, ದೆಹಲಿ-ಮುಂಬೈ, ಕೋಲ್ಕತಾ-ಮುಂಬೈ ಮತ್ತು ದೆಹಲಿ-ಚೆನ್ನೈ ಮಾರ್ಗಗಳಲ್ಲಿ ಸರಕು ಸಾಗಾಣೆ ಕಾರಿಡಾರ್‌ಗಳನ್ನು ಸೃಷ್ಟಿಸುವತ್ತ ಗಮನಹರಿಸಲಾಗುತ್ತಿದೆ.
ಇದನ್ನು ಹೊರತುಪಡಿಸಿ, ಪ್ರಯಾಣಿಕ ರೈಲುಗಳಲ್ಲಿ ಪ್ರಸ್ತುತವಿರುವ ಪ್ರತಿ ಗಂಟೆಗೆ 110-130 ಕಿ.ಮಿ. ದೂರವನ್ನು ಕ್ರಮಿಸುವ ವೇಗವನ್ನು ಹೆಚ್ಚಿಸಿ, ಪ್ರತಿ ಗಂಟೆಗೆ 160-200 ಕಿ.ಮಿ. ವೇಗದ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು.ಸರಕು ಸಾಗಾಣೆ ರೈಲುಗಳು ಪ್ರಸ್ತುತ ಪ್ರತಿ ಗಂಟೆಗೆ 60-70 ಕಿ.ಮಿ.ವೇಗವನ್ನು 100 ಕಿ.ಮಿ.ಗಳಿಗೆ ಹೆಚ್ಚಿಸಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿವೆ.