ಸತತ ಮೂರು ದಿನಗಳ ಏರಿಕೆಯಿಂದ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದ್ದ ಚಿನ್ನದ ದರ, ಇಂದಿನ ವಹಿವಾಟಿನಲ್ಲಿ ಪ್ರತಿ 10ಗ್ರಾಂಗೆ 140 ರೂಪಾಯಿಗಳ ಏರಿಕೆ ಕಂಡು 16,940 ರೂಪಾಯಿಗಳಿಗೆ ತಲುಪಿದೆ.
ಸ್ಟ್ಯಾಂಡರ್ಡ್ ಚಿನ್ನ ಹಾಗೂ ಆಭರಣ ಚಿನ್ನದ ದರ ಪ್ರತಿ 10ಗ್ರಾಂಗೆ 140 ರೂಪಾಯಿಗಳ ಏರಿಕೆ ಕಂಡು, ಕ್ರಮವಾಗಿ 16,940 ರೂ ಮತ್ತು 16,790 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಕುಸಿತವಾಗಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ, ಚಿನ್ನ ಸಂಗ್ರಹಗಾರರು ಚಿನ್ನದ ಮಾರಾಟದಲ್ಲಿ ತೊಡಗಿದ್ದರಿಂದ, ಚಿನ್ನದ ದರದಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 4.50 ಡಾಲರ್‌ಗಳ ಕುಸಿತ ಕಂಡು, 1,112.60 ಡಾಲರ್‌ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬೆಳ್ಳಿಯ ದರದಲ್ಲಿ ಕೂಡಾ, ಪ್ರತಿ ಕೆಜಿಗೆ 275 ರೂಪಾಯಿಗಳ ಕುಸಿತ ಕಂಡು 25,600 ರೂಪಾಯಿಗಳಿಗೆ ತಲುಪಿದೆ.
ಏತನ್ಮಧ್ಯೆ, ಬೆಳ್ಳಿ ನಾಣ್ಯ ದರ (100ನಾಣ್ಯಗಳು)ದಲ್ಲಿ ಯಾವುದೇ ಬದಲಾವಣೆಯಾಗದೇ, 33,400 ರೂಪಾಯಿಗಳಿಗೆ ಸ್ಥಿರವಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.