ಖಾಸಗಿ ಹೂಡಿಕೆಗೆ ಹಾಗೂ ಸಾಮಾಜಿಕ ಬದ್ಧತೆಗೆ ಉತ್ತೇಜನ ನೀಡುವಂತಹ ನೂತನ ವಹಿವಾಟು ಮಾದರಿಯ ಬಜೆಟ್ ನೀಡುವುದಾಗಿ ಕೇಂದ್ರ ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಬಜೆಟ್ ಮಂಡನೆಯ ಸಂದರ್ಭದಲ್ಲಿ ತಿಳಿಸಿದ್ದಾರೆ.
ನಮ್ಮ ಗುರಿ ಅಭಿವೃದ್ಧಿಯಾಗಿದೆ.ಪ್ರಸಕ್ತ ಬಜೆಟ್‌ನಲ್ಲಿ ವಾಣಿಜ್ಯ ಯೋಜನೆಗಳಿಗಿಂತ ಸಾಮಾಜಿಕ ಜವಾಬ್ದಾರಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸಚಿವೆ ಮಮತಾ ತಿಳಿಸಿದ್ದಾರೆ.
2020 ವಿಜನ್ ದೂರದೃಷ್ಟಿಯನ್ನಿಟುಕೊಂಡು ನಮ್ಮ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಗುರಿಯನ್ನು ತಲುಪುವ ವಿಶ್ವಾಸವಿದೆ.ಪ್ರಸ್ತುವಿರುವ 18 ಸಾವಿರ ಕಿ.ಮಿ. ರೈಲ್ವೆ ಹಳಿಯನ್ನು ದ್ವಿಗುಣ ಅಥವಾ ಬಹುಲೈನ್‌ಗಳಾಗಿ ಪರಿವರ್ತಿಸಲಾಗುವುದು ಎಂದರು.
ಅಡಳಿತಾತ್ಮಕ ಹಾಗೂ ಅಧಿಕಾರಿಗಳ ಆಮೆಗತಿಯ ಕಾರ್ಯವೈಖರಿಯಂದಾಗಿ ಖಾಸಗಿ ಹೂಡಿಕೆದಾರರು ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಇದರಿಂದ ನಾವು ಹೊರಬರಬೇಕಾಗಿದೆ. ಇದಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗುತ್ತಿದೆ. ಆದರೆ ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಮಮತಾ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ಪ್ರದಾನಮಂತ್ರಿ ಮನಮೋಹನ್ ಸಿಂಗ್,ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಸೇರಿದಂತೆ ಇತರ ಸಂಸದರು ಉಪಸ್ಥಿತರಿದ್ದಾರೆ.
ಕೇಂದ್ರ ರೈಲ್ವೆ ಖಾತೆ ಸಚಿವ ಮಮತಾ ಬ್ಯಾನರ್ಜಿ ನಾಲ್ಕನೇ ಬಾರಿಗೆ ರೈಲ್ವೆ ಬಜೆಟ್ ಮಂಡಿಸುತ್ತಿದ್ದು, ಯುಪಿಎ ಸರಕಾರದಲ್ಲಿ ಎರಡನೇ ಬಾರಿಗೆ ರೈಲ್ವೆ ಬಜೆಟ್ ಮಂಡಿಸುತ್ತಿದ್ದಾರೆ.