ಸಾರ್ವಜನಿಕ ಕ್ಷೇತ್ರದ ಕಂಪೆನಿಗಳ ಸಂಪರ್ಕ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು ಸರಕು ಸಾಗಾಣೆ ದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡು ಬರಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಮಮತಾ ಬ್ಯಾನರ್ಜಿ ಬಜೆಟ್ ಮಂಡನೆಯ ಸಂದರ್ಭದಲ್ಲಿ ತಿಳಿಸಿದ್ದಾರೆ.
ರೈಲ್ವೆ ಇಲಾಖೆ ಖಾಸಗೀಕರಣಗೊಳಿಸುವುದನ್ನು ತಳ್ಳಿಹಾಕಿದ ಮಮತಾ, ಪ್ರಸಕ್ತ ಬಜೆಟ್‌ನಲ್ಲಿ ಸಮಾಜಿಕ ಬದ್ಧತೆಗೆ ಹೆಚ್ಚಿನ ಒತ್ತು ನೀಡಿರುವುದಾಗಿ ಹೇಳಿದ್ದಾರೆ.
ವಾಣಿಜ್ಯ ವ್ಯವಹಾರ ಹೊತುಪಡಿಸಿ, ಜನಸಾಮಾನ್ಯರ ಸಾಮಾಜಿಕ ಜವಾಬ್ದಾರಿ ನನ್ನ ಗುರಿಯಾಗಿದೆ ಎಂದು ಸಚಿವ ಮಮತಾ ಸ್ಪಷ್ಟಪಡಿಸಿದ್ದಾರೆ.
ರೈಲು ಸಂಪರ್ಕದ ಮೂಲಕ ದೇಶದಲ್ಲಿ ಏಕತೆಯನ್ನು ಸಾರುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವೆ ಮಮತಾ ಹೇಳಿದ್ದಾರೆ.