ಲೋಕಸಭೆಯಲ್ಲಿ ರೈಲ್ವೆ ಬಜೆಟ್ ಮಂಡಿಸಿದ ಸಚಿವೆ ಬ್ಯಾನರ್ಜಿ, ಸ್ಲೀಪರ್ ಕ್ಲಾಸ್ ಇ-ಬುಕ್ಕಿಂಗ್ ಗರಿಷ್ಠ ಮಿತಿ 10 ರೂಪಾಯಿ ಹಾಗೂ ಎಸಿ ಕ್ಲಾಸ್‌ಗಳಿಗೆ 20 ರೂಪಾಯಿ ಸೇವಾ ಶುಲ್ಕವನ್ನು ಕಡಿತಗೊಳಿಸಿದ್ದಾರೆ. ಸೇವಾ ಶುಲ್ಕ ಕನಿಷ್ಠ 15 ರೂಪಾಯಿಗಳಿಂದ ಗರಿಷ್ಠ 40 ರೂಪಾಯಿಗಳಿಗೆ ಮಿತಿಗೊಳಿಸಲಾಗಿದೆ.
ಪ್ರಯಾಣಿಕ ಹಾಗೂ ಸರಕು ಸಾಗಾಣೆ ದರದಲ್ಲಿ ಹೆಚ್ಚಳವನ್ನು ತಳ್ಳಿ ಹಾಕಿದ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ದರ ಏರಿಕೆಯ ಹಿನ್ನೆಲೆಯಲ್ಲಿ ಅಹಾರಧಾನ್ಯ ಸೀಮೆಎಣ್ಣೆ ಹಾಗೂ ರಸಗೊಬ್ಬರ ಸರಕು ಸಾಗಾಣೆ ದರದಲ್ಲಿ ಪ್ರತಿ ಬೋಗಿಗೆ 100 ರೂಪಾಯಿಗಳಷ್ಟು ಕಡಿತ ಘೋಷಿಸಿದ್ದಾರೆ.
ಕಳೆದ ಏಳು ವರ್ಷಗಳಿಂದ ರೈಲ್ವೆ ಇಲಾಖೆ ಪ್ರಯಾಣಿಕ ದರದಲ್ಲಿ ಏರಿಕೆ ಮಾಡಿಲ್ಲ.
ಚಿಕಿತ್ಸೆಗಾಗಿ ತೆರಳುವ ಕ್ಯಾನ್ಸರ್ ರೋಗಿಗಳಿಗೆ ತ್ರಿ ಟೈರ್ ಎಸಿ ಹಾಗೂ ಸ್ಲೀಪರ್ ಕ್ಲಾಸ್ ಉಚಿತ ಪ್ರಯಾಣ ಮತ್ತು ಮದರಸಾ ವಿದ್ಯಾರ್ಥಿಗಳಿಗೆ ಮತ್ತು ಪತ್ರಕರ್ತರಿಗೆ ರಿಯಾಯತಿ ದರವನ್ನು ಘೋಷಿಸಲಾಗಿದೆ.
ಮುಂಬೈನಲ್ಲಿ ಉಪನಗರಗಳಿಗೆ ಪ್ರಯಾಣಿಸುವ 101 ನೂತನ ಸೇವೆಗಳನ್ನು ಆರಂಭಿಸಲಾಗುತ್ತಿದ್ದು, ಕೋಲ್ಕತಾ ಮತ್ತು ಚೆನ್ನೈನಿಂದ ಕೂಡಾ ಹೆಚ್ಚಿನ ಸೇವೆಯನ್ನು ಆರಂಭಿಸಲಾಗುತ್ತದೆ.ರವೀಂದ್ರ್‌ನಾಥ್ ಟ್ಯಾಗೋರ್ ಅವರ 150ನೇ ಜನ್ಮದಿನದಂದು, ಭಾರತದಿಂದ ಬಾಂಗ್ಲಾದೇಶಕ್ಕೆ ಪ್ರಯಾಣಿಸುವ 'ಸಂಸ್ಕೃತಿ ಎಕ್ಸ್‌ಪ್ರೆಸ್' ರೈಲನ್ನು ಘೋಷಿಸಲಾಗಿದೆ ಎಂದು ಸಚಿವೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.