ಲೋಕಸಭೆಯಲ್ಲಿ ನಾಲ್ಕನೇ ರೈಲು ಬಜೆಟ್ ಮಂಡಿಸಿದ ಸಚಿವೆ ಮಮತಾ ಬ್ಯಾನರ್ಜಿ, ಸಾಮಾನ್ಯ ಜನತೆಯ ಪ್ರಯಾಣದ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಕಾಯ್ದಿರಿಸದ ರೈಲುಗಳ ಸಂಚಾರವನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದರಭಂಗಾದಿಂದ ಮುಂಬೈವರೆಗೆ (ವಾರಂತ್ಯಕ್ಕೆ) ಹಾಗೂ ವಾಯಾ ಹೌರಾದಿಂದ -ಟಾಟಾ ನಗರ್ ಝಾರ್‌ಸುಗುಡಾ ಮಾರ್ಗವಾಗಿ ಗುವಾಹಟಿಯಿಂದ ಮುಂಬೈಗೆವಾಯಾ ಕಟಿಹಾರ್‌ದಿಂದ ಸೀತಾಪುರ್ ಮಾರ್ಗವಾಗಿ ನ್ಯೂ ಜಲಪೈಗುರಿಯಿಂದ ಅಮೃತ್‌ಸರ್(ವಾರದ ಅವಧಿಯಲ್ಲಿ)ಗೆ ರೈಲು ಸಂಚಾರವನ್ನು ಆರಂಭಿಸಲಾಗುತ್ತಿದೆ.
ಜನ್ಮಭೂಮಿ ರೈಲುಗಳು: ಅತ್ಯಂಕ ಕಠಿಣ ಪರಿಸ್ಥಿತಿಯಲ್ಲಿ ದೇಶದ ಗಡಿಯನ್ನು ರಕ್ಷಿಸುವ ಸೈನಿಕರಿಗಾಗಿ ನೂತನ ರೈಲು ಸಂಪರ್ಕಗಳನ್ನು ಒದಗಿಸಲು ಗೇಜ್ ಪರಿವರ್ತನೆ ಕಾರ್ಯ ನಡೆಯುತ್ತಿದ್ದು, ನೇರ ಸಂಪರ್ಕವನ್ನು ಒದಗಿಸಲಾಗುತ್ತಿದೆ.
ಜೋಧ್‌ಪುರ್ ಫಾಲೋಡಿ, ಲಾಲ್‌ಘರ್, ಬಿರಧ್ವಾಲ್,ಪಿಲಿಬಂಗಾ, ಮಹಾಜನ್,ಸೂರತ್ ಘರ್ ಹನುಮಾನ್ ಘರ್,ಭಟಿಂದಾ, ಫರಿದ್‌ಕೋಟ್ ಫಿರೋಜ್‌ಪುರ್, ಜಲಂಧರ್,ಚಕ್ಕಿ ಬ್ಯಾಂಕ್, ಸಂಬಾ, ಬರಿ ಬ್ರಹ್ಮಾನ್, ಜಮ್ಮು ತವಿ ಮತ್ತು ಉಧ್ಹಮ್‌ಪುರ್ ಮಾರ್ಗವಾಗಿ ಅಹ್ಮದಾಬಾದ್-ಉದ್ಹಮ್‌ಪುರ್ ನಗರಕ್ಕೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.