ಮಹಾಕವಿ ರವೀಂದ್ರನಾಥ್ ಟ್ಯಾಗೋರ್ ಅವರ 150ನೇ ಹುಟ್ಟುಹಬ್ಬದ ಅಂಗವಾಗಿ ನೆರೆಯ ರಾಷ್ಟ್ರವಾದ ಬಾಂಗ್ಲಾದೇಶಕ್ಕೆ 'ಸಂಸ್ಕ್ರತಿ ಎಕ್ಸ್‌ಪ್ರೆಸ್ ' ರೈಲು ಸಂಪರ್ಕ ಸೇವೆಯನ್ನು ಆರಂಭಿಸಲಾಗುತ್ತಿದೆ ಎಂದು ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭಾರತ ಮತ್ತು ಬಾಂಗ್ಲಾ ದೇಶಗಳ ರಾಷ್ಟ್ರಗೀತೆಗಳನ್ನು ಬರೆದ ರವೀಂದ್ರ್‌ನಾಥ್ ಟ್ಯಾಗೋರ್, ವಿಶ್ವದಲ್ಲಿ ಏಕೈಕ ಮಹಾಕವಿಯಾಗಿದ್ದಾರೆ. ಬಾಂಗ್ಲಾ ದೇಶಕ್ಕಾಗಿ ಅಮರ್ ಸೋನಾರ್ ಬಾಂಗ್ಲಾ ಮತ್ತು ಭಾರತದ ಜನ ಗಣ ಮನ ರಾಷ್ಟ್ರಗೀತೆಯನ್ನು ಟ್ಯಾಗೋರ್ ಬರೆದಿದ್ದಾರೆ.
ಭಾರತ, ಬಾಂಗ್ಲಾ ವಿಭಜನೆಗೆ ಮುನ್ನ ಬಾಂಗ್ಲಾದಲ್ಲಿ ವಾಸಿಸುತ್ತಿದ್ದ ಟ್ಯಾಗೋರ್, ಜನತೆಗೆ ಸಾಹಿತ್ಯದ ಸವಿಯನ್ನು ತೋರಿಸಿದ್ದಾರೆ. ಅವರ ನೆನಪಿಗಾಗಿ ಹಾಗೂ ಭಾರತ ಮತ್ತು ಬಾಂಗ್ಲಾದೇಶಗಳ ನಡುವಣ ಮೈತ್ರಿಯನ್ನು ಹೆಚ್ಚಿಸಲು, ಬಾಂಗ್ಲಾ ಸರಕಾರದ ಅನುಮತಿಯೊಂದಿಗೆ ವಿಶೇಷ ರೈಲು ಸೇವೆಯನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.