ಆರ್ಥಿಕ ವಂಚನೆಗಳಿಂದ ರಾಷ್ಟ್ರದ ಭಧ್ರತೆಗೆ ಬೆದರಿಕೆ:ಮುಖರ್ಜಿ
ನವದೆಹಲಿ, ಗುರುವಾರ, 25 ಫೆಬ್ರವರಿ 2010( 12:50 IST )
ಹೆಚ್ಚುತ್ತಿರುವ ಆರ್ಥಿಕ ವಂಚನೆಗಳು ದೇಶದ ಭಧ್ರತೆಗೆ ಬಹುದೊಡ್ಡ ಬೆದರಿಕೆಯಾಗಿವೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಆರ್ಥಿಕ ವಂಚನೆ ಅಪರಾಧ ಎಸಗುತ್ತಿರುವವರು ಆಧುನಿಕ ತಂತ್ರಜ್ಞಾನದಲ್ಲಿ ಪರಿಣಿತಿಯನ್ನು ಪಡೆದಿದ್ದಾರೆ ಎಂದು ಕೇಂದ್ರ ಅಬಕಾರಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಣಬ್ ಮುಖರ್ಜಿ ಮಾತನಾಡುತ್ತಿದ್ದರು.
ಅಂತಾರಾಷ್ಟ್ರೀಯ ಗಡಿಭಾಗಗಳಲ್ಲಿ ಆರ್ಥಿಕ ವಂಚನೆಗಳು ನಡೆಯುತ್ತಿರುವುದರಿಂದ, ಭಾರತದ ಭಧ್ರತೆಗೆ ಆತಂಕ ಸೃಷ್ಟಿಸಿವೆ. ಇಂತಹ ಬೆಳವಣಿಗೆಗಳ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖರ್ಜಿ ತಿಳಿಸಿದ್ದಾರೆ.
ಆರ್ಥಿಕ ವಂಚನೆಗಳು ಕೇವಲ ಭಾರತದ ಗಡಿಯಲ್ಲಿ ನಡೆಯುತ್ತಿಲ್ಲ. ಆದರೆ ಸಂಪರ್ಕ ಜಾಲವನ್ನು ವಿಸ್ತರಿಸಿಕೊಂಡಿರುವ ಅಪರಾಧಿಗಳು ಇತರ ದೇಶಗಳ ಗಡಿಭಾಗಗಳಲ್ಲಿ ಕೂಡಾ ನಡೆಯುತ್ತಿವೆ. ದೇಶದ ಆರ್ಥಿಕತೆಯಲ್ಲಿ ಏರುಪೇರು ಮಾಡುವ ಉದ್ದೇಶವನ್ನು ಹೊಂದಿವೆ ಎಂದು ನುಡಿದರು.
ದೇಶದ ಹಿತಾಸಕ್ತಿಗೆ, ಭಧ್ರತೆಗೆ ಧಕ್ಕೆ ತರುವಂತಹ ನೂತನ ಸವಾಲುಗಳನ್ನು ಎದುರಿಸುವಲ್ಲಿ ಕೇಂದ್ರ ಅಬಕಾರಿ ಮಂಡಳಿ ಹಾಗೂ ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಶ್ರಮಿಸಬೇಕಾಗಿದೆ ಎಂದು ವಿತ್ತಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.