ದುಬೈ ರಫ್ತು ಮಾರುಕಟ್ಟೆಯಲ್ಲಿ ಶೇ.40ರಷ್ಟು ಪಾಲನ್ನು ಹೊಂದಿರುವ ಭಾರತ 268.348 ಬಿಲಿಯನ್ ವಹಿವಾಟು ನಡೆಸಿ, ಸತತ ಎರಡನೇ ಬಾರಿಗೆ ಅಗ್ರಸ್ಥಾನವನ್ನು ಪಡೆದಿದೆ.
ಸ್ವಿಟ್ಡರ್‌ಲ್ಯಾಂಡ್ 109.6 ಬಿಲಿಯನ್ ರೂಪಾಯಿಗಳ ವಹಿವಾಟು ನಡೆಸುವ ಮೂಲಕ ಎರಡನೇ ಸ್ಥಾನವನ್ನು ಪಡೆದಿದೆ.ಸೌದಿ ಅರೇಬಿಯಾ ಮೂರನೇ ಸ್ಥಾನ ಹಾಗೂ ಪಾಕಿಸ್ತಾನ ಮತ್ತು ಇರಾನ್ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನವನ್ನು ಪಡೆದಿವೆ.
ದುಬೈಗೆ ರಫ್ತು ಮಾಡುವ ವಸ್ತುಗಳಲ್ಲಿ ಚಿನ್ನ ಅಗ್ರಸ್ಥಾನವನ್ನು ಪಡೆದಿದೆ. ಭಾರತ ದುಬೈನ ಬೃಹತ್ ಚಿನ್ನದ ರಫ್ತು ಮಾರುಕಟ್ಟೆಯಾಗಿದೆ.
ಭಾರತ ಪ್ರಸಕ್ತ ಆರ್ಥಿಕ ವರ್ಷದಲ್ಲಿ ದುಬೈನ ಚಿನ್ನದ ರಫ್ತು ವಹಿವಾಟು 8.32 ಬಿಲಿಯನ್ ರೂಪಾಯಿಗಳಿಗೆ ತಲುಪಿದೆ.ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.23ರಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.