ಬಹುನಿರೀಕ್ಷಿತ 3ಜಿ ತರಂಗಾಂತರಗಳನ್ನು ಪಡೆಯಲು ಅರ್ಜಿಗಳನ್ನು ಅಹ್ವಾನಿಸಿದ ಸರಕಾರ, ಬಹುತೇಕ ವೃತ್ತಗಳಲ್ಲಿ ಮೂರು ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಅನುಮತಿ ನೀಡಿದ್ದು, ಪಂಜಾಬ್ ಮತ್ತು ಜಾಲಂಧರ್ ಸೇರಿದಂತೆ ಐದು ರಾಜ್ಯಗಳಲ್ಲಿ ನಾಲ್ಕು ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಅವಕಾಶ ನೀಡಿದೆ.
ಸರಕಾರದ ಅಧಿಸೂಚನೆಯ ಪ್ರಕಾರ, 3ಜಿ ಸ್ಪೆಕ್ಟ್ರಂ ಹರಾಜನ್ನು ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈ ಸೇರಿದಂತೆ 22 ವೃತ್ತಗಳಲ್ಲಿ ಹರಾಜು ನಡೆಯಲಿದೆ.
ಪಂಜಾಬ್, ಪಶ್ಚಿಮ ಬಂಗಾಳ ಬಿಹಾರ್, ಹಿಮಾಚಲ್ ಪ್ರದೇಶ ಮತ್ತು ಜಮ್ಮು ಕಾಶ್ಮಿರ ರಾಜ್ಯಗಳಲ್ಲಿ ಮಾತ್ರ ನಾಲ್ಕು ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಅವಕಾಶ ನೀಡಲಾಗಿದೆ.
3ಜಿ ತರಂಗಾಂತರ ಹರಾಜು ಬಿಡ್‌ನಲ್ಲಿ ಯಶಸ್ವಿಯಾಗುವ ಖಾಸಗಿ ಟೆಲಿಕಾಂ ಕಂಪೆನಿಗಳು, ಸೆಪ್ಟೆಂಬರ್ 1ರಿಂದ 3ಜಿ ಸೇವೆಗಳನ್ನು ಪಡೆಯಲಿದೆ ಎಂದು ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.