ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕೆಟ್ಟ ದಿನಗಳು ಕಳೆದಿವೆ: ಪ್ರಣಬ್ ಭರವಸೆಯ ನುಡಿ (Budget 2010 | UPA Budget 2010 | General Budget 2010 | Pranab Mukherjee | Central Budget 2010)
Bookmark and Share Feedback Print
 
2010-11ನೇ ಸಾಲಿನ ವಿತ್ತೀಯ ಆಯವ್ಯಯ ಪತ್ರವನ್ನು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಸತತ ಎರಡು ವರ್ಷಗಳ ಕಠಿಣತಮ ಪರಿಸ್ಥಿತಿ ಮುಕ್ತಾಯ ಹಂತಕ್ಕೆ ತಲುಪಿದೆ ಎಂದು ಹೇಳಿದರಲ್ಲದೆ, ಆರ್ಥಿಕತೆಗೆ ಸಂಬಂಧಿಸಿ ಅತ್ಯಂತ ಕೆಟ್ಟ ಪರಿಸ್ಥಿತಿ ಕೊನೆಗೊಂಡಿದೆ. ಮುಂಬರುವ ದಿನಗಳಲ್ಲಿ ಸವಾಲುಗಳಿದ್ದರೂ ಭರವಸೆಯ ಬೆಳಕಿದೆ ಎಂದು ಭರವಸೆ ತುಂಬಿದ್ದಾರೆ.

ಆರ್ಥಿಕ ಬಿಕ್ಕಟ್ಟು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ನಾನು ವಿಶ್ವಾಸದಿಂದಲೇ ನಿಮ್ಮೆದುರು ಹೇಳಬಲ್ಲೆ ಎಂದು ಸಂಸತ್ತಿನಲ್ಲಿ ನುಡಿದ ಮುಖರ್ಜಿ, ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ನಾಯಕತ್ವದಲ್ಲಿ 9 ತಿಂಗಳ ಹಿಂದೆ ಯುಪಿಎ ಅಧಿಕಾರಕ್ಕೆ ಮರಳಿದಾಗ ಇದ್ದ ಸವಾಲುಗಳಿಗಿಂತ ಈಗಲೂ ಕಡಿಮೆ ಇದೆ ಎಂದರ್ಥವಲ್ಲ ಎಂದೂ ಸೇರಿಸಿದರು.

ಮಾತ್ರವಲ್ಲದೆ ಭಾರತದ ಆರ್ಥಿಕ ಅಭಿವೃದ್ಧಿ ದರವು ಶೇ.9ನ್ನೂ ದಾಟಿ ಎರಡಂಕಿ ತಲುಪುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ