ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೈಲ್ವೇ ಬಜೆಟಿನಷ್ಟು 'ಸದ್ದು' ಮಾಡದ ಪ್ರಣಬ್ ಬಜೆಟ್ (Budget 2010 | UPA Budget 2010 | General Budget 2010 | Pranab Mukherjee | Central Budget 2010)
ರೈಲ್ವೇ ಸಚಿವ ಮಮತಾ ಬ್ಯಾನರ್ಜಿ ಮಂಡಿಸಿದ ರೈಲ್ವೇ ಬಜೆಟ್ ಸಂದರ್ಭ ಇದ್ದ ಕೋಲಾಹಲ, ಕಿತ್ತಾಟ, ವಾಗ್ವಾದಗಳು ವಿತ್ತ ಸಚಿವ ಪ್ರಣಬ್ ಮುಖರ್ಜಿ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ಸಾಮಾನ್ಯ ಬಜೆಟ್ ಸಂದರ್ಭದಲ್ಲಿ ಇರಲಿಲ್ಲ.
ಮಮತಾ ಬ್ಯಾನರ್ಜಿ ರೈಲ್ವೇ ಬಜೆಟ್ ಮಂಡಿಸುತ್ತಿದ್ದಾಗ ಕೂಗಾಟ ಮಾಡಿ, ತಮ್ಮ ರಾಜ್ಯಕ್ಕೆ ಏನೂ ಇಲ್ಲ ಎಂದೆಲ್ಲಾ ಗದ್ದಲ ಎಬ್ಬಿಸುತ್ತಿದ್ದರೆ, ಇಂದು ಮುಖರ್ಜಿ ಭಾಷಣ ಓದಲಾರಂಭಿಸುತ್ತಿರುವಂತೆಯೇ ಗಮನವಿಟ್ಟು ಕೇಳುತ್ತಿತ್ತು.
ಮಮತಾ ಅವರು ಮುಂಬರುವ ಚುನಾವಣೆಗಳನ್ನು ಮುಂದಿಟ್ಟುಕೊಂಡು ತಮ್ಮ ರಾಜ್ಯಕ್ಕೇ ಹೆಚ್ಚಿನ ಒತ್ತು ನೀಡುತ್ತಾ, ಮಧ್ಯೆ ಮಧ್ಯೆ ಆಕ್ರೋಶಗೊಳ್ಳುತ್ತಾ, ತಮ್ಮ ಬಂಗಾಳಿ ಉಚ್ಚಾರಣೆಯಿಂದಾಗಿ ಸಭಾಸದರ ನಗುವಿಗೆ ಕಾರಣವಾಗುತ್ತಾ, ಫುಲ್ ಜೋಶ್‌ನಲ್ಲಿ ಬಜೆಟ್ ಮಂಡಿಸುತ್ತಿದ್ದರೆ, ಅವರದೇ ರಾಜ್ಯದವರಾದ ಪ್ರಣಬ್ ಅವರ ಬಜೆಟ್ ಭಾಷಣ ಬಹುತೇಕ ನಿರ್ಭಾವುಕವಾದಂತಿತ್ತು. ಎಲ್ಲೋ ಕೆಲವೆಡೆ ಅವರ ಮುಖ ಅರಳುತ್ತಿತ್ತು. ಅವರ ಬಜೆಟ್ ಭಾಷಣ ಮಂಡನೆಯಲ್ಲಿ ಬಂಗಾಳಿ ಉಚ್ಚಾರಣೆ ವಿಧಾನವು ಕೂಡ ಸಭಿಕರ ಮುಸಿ ನಗುವಿಗೆ ಕಾರಣವಾಗಿದ್ದಂತೂ ಸತ್ಯ.