ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಧ್ಯಮವರ್ಗಕ್ಕೆ ಆದಾಯ ತೆರಿಗೆಯಲ್ಲಿ ಒಂದಿಷ್ಟು ನಿರಾಳತೆ (Budget 2010 | UPA Budget 2010 | General Budget 2010 | Pranab Mukherjee | Central Budget 2010)
Bookmark and Share Feedback Print
 
ಕೇಂದ್ರ ವಿತ್ತ ಸಚಿವ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್, ಈಗಾಗಲೇ ಬೆಲೆ ಏರಿಕೆ ಬಿಸಿಯಲ್ಲಿ ತತ್ತರಿಸುತ್ತಿರುವ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದ್ದರೂ, ವೈಯಕ್ತಿಕ ಮತ್ತು ಕಾರ್ಪೊರೇಟ್ ತೆರಿಗೆದಾರರಿಗೆ ಸರಕಾರ ಒಂದಿಷ್ಟು ದಯೆ ತೋರಿದೆ. 1.6 ಲಕ್ಷ ವಾರ್ಷಿಕ ಆದಾಯವಿರುವವರಿಗೆ ಯಾವುದೇ ತೆರಿಗೆ ಇಲ್ಲ.

ಅದಕ್ಕಿಂತ ಮಿಗಿಲು 5 ಲಕ್ಷದವರೆಗಿನ ವಾರ್ಷಿಕ ಆದಾಯಕ್ಕೆ ಶೇ.10 ತೆರಿಗೆ ಮತ್ತು 8 ಲಕ್ಷ ವರೆಗಿನ ಆದಾಯ ಹೊಂದಿರುವವರಿಗೆ ಶೇ. 20 ತೆರಿಗೆ ವಿಧಿಸಲಾಗುತ್ತದೆ. ಅದಕ್ಕಿಂತಲೂ ಹೆಚ್ಚು ಆದಾಯವುಳ್ಳವರು ಶೇ.30 ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ.

ಇದರೊಂದಿಗೆ, ದೀರ್ಘಾವಧಿ ಮೂಲಸೌಕರ್ಯ ಬಾಂಡ್‌ಗಳಲ್ಲಿ 20 ಸಾವಿರ ರೂಪಾಯಿವರೆಗಿನ ದೀರ್ಘಕಾಲಿಕ ಹೂಡಿಕೆಗಳಿಗೆ ಆದಾಯ ತೆರಿಗೆ ವಿನಾಯಿತಿಯನ್ನೂ ಘೋಷಿಸಲಾಗಿದೆ.

ಈಗಿರುವ ವ್ಯವಸ್ಥೆಯಂತೆ, 1.6 ಲಕ್ಷದವರೆಗೆ ಆದಾಯ ತೆರಿಗೆ ಇಲ್ಲ, 3 ಲಕ್ಷದ ವರೆಗಿನ ಆದಾಯಕ್ಕೆ ಶೇ.10, 5 ಲಕ್ಷದವರೆಗಿನ ಆದಾಯಕ್ಕೆ ಶೇ.20 ಹಾಗೂ ಅದಕ್ಕಿಂತ ಹೆಚ್ಚು ಆದಾಯವುಳ್ಳವರಿಗೆ ಶೇ.30 ಆದಾಯ ತೆರಿಗೆ ವಿಧಿಸಲಾಗುತ್ತಿದೆ.

ಇದಲ್ಲದೆ, ಕಾರ್ಪೋರೇಟ್ ತೆರಿಗೆಗಳ ಮೇಲಿನ ಸರ್ಚಾರ್ಜ್ ಕೂಡ ಇಳಿಸಲಾಗಿದ್ದು, ಶೇ.10 ಇದ್ದದ್ದು ಶೇ.7.5ಕ್ಕೆ ಇಳಿಸಲಾಗಿದೆ. ಆದಾಯ ತೆರಿಗೆ ಮೇಲಿನ ಸರ್ಚಾರ್ಜ್ ಕಳೆದ ವರ್ಷವೇ ರದ್ದುಗೊಳಿಸಲಾಗಿತ್ತು.

ಆದರೆ, ಹಲವಾರು ಕಾರಣಗಳಿಗಾಗಿ ತೆರಿಗೆ ವ್ಯಾಪ್ತಿಯಲ್ಲಿ ಬಾರದಿರುವ ಕಂಪನಿಗಳ ಲಾಭಾಂಶದ ಮೇಲೆ ವಿತ್ತ ಸಚಿವರು ಕನಿಷ್ಠ ಪರ್ಯಾಯ ತೆರಿಗೆ (ಎಂಎಟಿ)ಯನ್ನು ಶೇ.15ರಿಂದ ಶೇ.18ಕ್ಕೆ ಏರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ