ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ತೆರಿಗೆ ಹೊರೆ: ಮಾರುತಿ, ಹುಂಡೈ ದರ ಮತ್ತಷ್ಟು ದುಬಾರಿ (Budget 2010 | UPA Budget 2010 | General Budget 2010 | Pranab Mukherjee |)
Bookmark and Share Feedback Print
 
ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ 2010-11ರ ಸಾಲಿನ ಬಜೆಟ್ ಅನ್ನು ಶುಕ್ರವಾರ ಮಂಡಿಸಿದ ಬೆನ್ನಲ್ಲೇ, ಸರ್ಕಾರದ ತೆರಿಗೆ ಹೆಚ್ಚಳದ ನಿರ್ಧಾರವನ್ನು ತಿರಸ್ಕರಿಸಿರುವ ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳು, ಇದರಿಂದಾಗಿ ಕಾರುಗಳ ಬೆಲೆಯಲ್ಲಿ ಸುಮಾರು 25ಸಾವಿರ ರೂಪಾಯಿ ಹೆಚ್ಚಳವಾಗುವುದಾಗಿ ಮಾರುತಿ ಸುಜುಕಿ ಇಂಡಿಯಾ, ಹುಂಡೈ, ಟೊಯೋಟಾ ಕಂಪನಿಗಳು ತಿಳಿಸಿವೆ.

ದೇಶದ ಪ್ರತಿಷ್ಠಿತ ಕಾರು ಉತ್ಪಾದನಾ ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ(ಎಂಎಸ್‌ಐ), ಕೇಂದ್ರ ಸರ್ಕಾರ ಉತ್ಪಾದನಾ ತೆರಿಗೆಯನ್ನು ಶೇ.10ರಷ್ಟು ಏರಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕಾರುಗಳ ಬೆಲೆ ಶೇ.2ರಷ್ಟು ಹೆಚ್ಚಳವಾಗಲಿದೆ ಎಂದು ಎಂಎಸ್‌ಐ ಹೇಳಿದೆ.

ಅದೇ ರೀತಿ ಪ್ರಮುಖ ಕಂಪನಿಗಳಾದ ಹುಂಡೈ ಮೋಟಾರ್ ಇಂಡಿಯಾ, ಕೇಂದ್ರದ ತೆರಿಗೆ ಹೆಚ್ಚಳ ನಿರ್ಧಾರದಿಂದಾಗಿ ಕಂಪನಿಯ ಕಾರುಗಳ ಬೆಲೆ 6,500-25ಸಾವಿರ ರೂ.ಗಳವರೆಗೆ ಹಾಗೂ ಟೊಯೋಟಾ ಕಾರುಗಳ ಬೆಲೆ 15ಸಾವಿರ ರೂಪಾಯಿವರೆಗೆ ಏರಿಕೆಯಾಗಲಿದೆ ಎಂದು ತಿಳಿಸಿವೆ.

ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಯಲ್ಲಿ ಮುಖರ್ಜಿ ಅವರು ಉತ್ಪಾದನಾ ತೆರಿಗೆಯನ್ನು ಶೇ.10ರಷ್ಟು ಹೆಚ್ಚಿಸಿರುವುದು ದೊಡ್ಡ ಹೊರೆಯಾಗಿದೆ. ಇದನ್ನು ಸಮರ್ಪಕವಾಗಿ ಸರಿದೂಗಿಸಲು ಕಾರುಗಳ ಬೆಲೆಯಲ್ಲಿ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್.ಸಿ.ಭಾರ್ಗವ ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ