ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2010-11ರಲ್ಲಿ ಜಿಡಿಪಿಯ ಶೇ.5.5ಕ್ಕೆ ವಿತ್ತೀಯ ಕೊರತೆ: ಪ್ರಣಬ್ (Fiscal deficit 2010-11 | GDP | Pranab Mukherjee | Union Budget 2010)
Bookmark and Share Feedback Print
 
2010-11ರ ಸಾಲಿನಲ್ಲಿ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಮೇಲಿನ ವಿತ್ತೀಯ ಕೊರತೆಯನ್ನು ತಗ್ಗಿಸಲು ಉದ್ದೇಶಿಸಿರುವ ಪ್ರಣಬ್ ಮುಖರ್ಜಿಯವರು, ಶೇ.5.5ರಷ್ಟು ಇಳಿಕೆಗೊಳಿಸುವ ಗುರಿಯಿಟ್ಟುಕೊಳ್ಳಲಾಗಿದೆ ಎಂದು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಒಟ್ಟು ದೇಶೀಯ ಉತ್ಪಾದನೆ ಹೆಚ್ಚಳ ನಿರೀಕ್ಷೆಯಲ್ಲಿರುವ ಭಾರತವು ವಿತ್ತೀಯ ಕೊರತೆಯನ್ನು ವರ್ಷದಿಂದ ವರ್ಷಕ್ಕೆ ಇಳಿಕೆಗೊಳಿಸುವ ಗುರಿಯಿಟ್ಟುಕೊಂಡಿದೆ. ವೆಚ್ಚ ಮತ್ತು ಆದಾಯದ ನಡುವಿನ ವ್ಯತ್ಯಾಸವನ್ನು ಆರ್ಥಿಕ ಕೊರತೆಯೆಂದು ಪರಿಗಣಿಸಲಾಗುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ (2009-10) ಶೇ.6.9ಕ್ಕೆ ಪರಿಷ್ಕರಣೆಗೊಳ್ಳಲಿದೆ ಎಂದು 2010-2011ರ ಸಾಲಿನ ಮುಂಗಡ ಪತ್ರ ಮಂಡಿಸುತ್ತಾ ಮುಖರ್ಜಿ ತಿಳಿಸಿದ್ದಾರೆ.

ಮುಂದಿನ ಆರ್ಥಿಕ ವರ್ಷದಲ್ಲಿ 3.45 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಎರವಲಿನ ಗುರಿಯಿಟ್ಟುಕೊಂಡಿರುವ ಸಚಿವರು, ಭಾರತೀಯ ರಿಸರ್ವ್ ಬ್ಯಾಂಕ್ ಜತೆಗೆ ಸಮಾಲೋಚನೆ ನಡೆಸಿದ ನಂತರ ಸಾಲ ಪಡೆದುಕೊಳ್ಳುವ ಹಂತಗಳನ್ನು ನಿರ್ಧರಿಸಲಾಗುತ್ತದೆ ಎಂದರು.

2011-12ರ ಸಾಲಿನಲ್ಲಿ ಶೇ.4.8 ಹಾಗೂ 2012-13ರ ಸಾಲಿನಲ್ಲಿ ಶೇ.4.1ಕ್ಕೆ ಆರ್ಥಿಕ ವಿತ್ತೀಯ ಕೊರತೆಯನ್ನು ಇಳಿಕೆಗೊಳಿಸುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ ಎಂದೂ ಇದೇ ಸಂದರ್ಭದಲ್ಲಿ ಮುಖರ್ಜಿ ತಿಳಿಸಿದ್ದಾರೆ.

2008-09ರಲ್ಲಿ ದೇಶವು ಶೇ.7.8ರ ವಿತ್ತೀಯ ಕೊರತೆ ಎದುರಿಸಿತ್ತು. ಆದರೆ ಈ ಬಾರಿ ಅಂದರೆ 2009-10ನೇ ಸಾಲಿನಲ್ಲಿ ಇದನ್ನು ಶೇ.6.9ಕ್ಕೆ ಪರಿಷ್ಕರಣೆಗೊಳಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಇದನ್ನು ಇಲ್ಲವಾಗಿಸುವ ಗುರಿ ಭಾರತದ್ದು ಎಂದು ವಿವರಣೆ ನೀಡಿದರು.

ಇದೇ ವರ್ಷದ ಏಪ್ರಿಲ್ ಒಂದರಿಂದ ನೇರ ತೆರಿಗೆ ಪದ್ಧತಿ ಜಾರಿಗೆ ತರಲಾಗುತ್ತದೆ. ಇದರಲ್ಲಿ ಸರಕಾರ ಸಫಲವಾಗುತ್ತದೆ ಎಂಬ ಸಂಪೂರ್ಣ ಭರವಸೆ ನನಗಿದೆ. ಇದರೊಂದಿಗೆ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯನ್ನೂ ಮುಂಗಡವಾಗಿ ಜಾರಿಗೆ ತರಲಾಗುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ