ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂಧನ ದರ ಇಳಿಕೆಗೆ ಸರಕಾರ ನಕಾರ :ಸುನೀಲ್ ಮಿತ್ರಾ (Petroleum products | Rollback | Duty hike | Budget | Pranab Mukherjee)
Bookmark and Share Feedback Print
 
ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಕುರಿತಂತೆ ಯುಪಿಎ ಮೈತ್ರಿಕೂಟ ಹಾಗೂ ವಿರೋಧ ಪಕ್ಷಗಳ ಮಧ್ಯೆಯು ದರ ಏರಿಕೆಯನ್ನು ಹಿಂಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕಂದಾಯ ಕಾರ್ಯದರ್ಶಿ ಸುನೀಲ್ ಮಿತ್ರಾ ಹೇಳಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೇರಿಕೆ ಮಾಜಲಾಗಿರುವ ಅಬಕಾರಿ ಹಾಗೂ ಕಸ್ಟಮ್ಸ್ ತೆರಿಗೆಗಳನ್ನು ಹಿಂಪಡೆಯುವ ಸಾಧ್ಯತೆಗಳ ಬಗ್ಗೆ ಪ್ರಶ್ನಿಸಿದಾಗ, ಇಲ್ಲ. ತೆರಿಗೆ ಏರಿಕೆಯನ್ನು ಹಿಂಪಡೆಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2010-2011 ಆರ್ಥಿಕ ಸಾಲಿಗಾಗಿ ಮಂಡಿಸಿದ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲೆ ಕಸ್ಟಮ್ಸ್ ತೆರಿಗೆಯನ್ನು ಶೇ.2.5ರಿಂದ ಶೇ.7.5ಕ್ಕೆ ಏರಿಕೆ ಘೋಷಿಸಲಾಗಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಅಬಕಾರಿ ತೆರಿಗೆಯಲ್ಲಿ 1ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

ಫೆಬ್ರವರಿ 27ರಿಂದ ಪೆಟ್ರೋಲ್ ದರದಲ್ಲಿ 2.67 ರೂಪಾಯಿಗಳಷ್ಟು ಹಾಗೂ ಡೀಸೆಲ್‌ ದರದಲ್ಲಿ 2.58 ರೂಪಾಯಿಗಳಷ್ಟು ದರ ಏರಿಕೆ ಮಾಡಲಾಗಿದೆ.ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 44.72 ಹಾಗೂ ಡೀಸೆಲ್‌ಗೆ 32.92 ರೂಪಾಯಿಗಳಿಗೆ ತಲುಪಿದೆ.

ಏತನ್ಮಧ್ಯೆ, ಬಜೆಟ್ ಮಂಡನೆಯ ನಂತರ ವಿತ್ತಸಚಿವ ಪ್ರಣಬ್ ಮುಖರ್ಜಿ ಮಾತನಾಡಿ, ಅಬಕಾರಿ ತೆರಿಗೆಯನ್ನು ಹೆಚ್ಚಿಸುವುದರಿಂದ, ಹಣದುಬ್ಬರದ ಸಗಟು ಸೂಚ್ಯಂಕ ದರದಲ್ಲಿ ಶೇ.0.41ರಷ್ಟು ಪ್ರಭಾವ ಬೀರಲಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ