ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತಕ್ಕೆ 400 ವಿಮಾನನಿಲ್ದಾಣಗಳ ಅವಶ್ಯಕತೆ:ಪ್ರಫುಲ್ (Praful Patel | India Aviation | Airports | Aviation industry)
Bookmark and Share Feedback Print
 
ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತಕ್ಕೆ ಮುಂಬರುವ 10 ವರ್ಷಗಳಲ್ಲಿ 400 ವಿಮಾನ ನಿಲ್ದಾಣಗಳು ಹಾಗೂ 3000 ವಿಮಾನಗಳ ಅಗತ್ಯತೆ ಎದುರಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ.

ದೇಶದ ನಾಗರಿಕ ವಿಮಾನಯಾನ ಕ್ಷೇತ್ರ ವಾರ್ಷಿಕವಾಗಿ ಶೇ.18ರಷ್ಟು ಏರಿಕೆ ಕಾಣುತ್ತಿರುವುದರಿಂದ, ಮುಂಬರುವ 10 ವರ್ಷಗಳ ಅವಧಿಯಲ್ಲಿ 3000 ವಿಮಾನಗಳ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.

ವಿಮಾನಯಾನ ಕ್ಷೇತ್ರಕ್ಕೆ ಮೂಲಸೌಲಭ್ಯಗಳನ್ನು ಒದುಗಿಸುವುದು ಮಾತ್ರ ನಮ್ಮ ಕೆಲಸವಲ್ಲ. ವಿಮಾನಯಾನ ಪ್ರಯಾಣಿಕರಿಗೆ ಸುರಕ್ಷತೆ ಹಾಗೂ ಭಧ್ರತೆಯನ್ನು ನೀಡುವುದು ಅಗತ್ಯ ಕರ್ತವ್ಯವಾಗಿದೆ ಎಂದು 'ಇಂಡಿಯಾ ಏವಿಯೇಶನ್-2010'ಐದು ದಿನಗಳ ಏರ್‌ ಶೋ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಸಚಿವ ಪ್ರಫುಲ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ