ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜನರಲ್ ಮೋಟಾರ್ಸ್ ಕಾರುಗಳ ಮಾರಾಟದಲ್ಲಿ ಏರಿಕೆ (Car maker | General Motors | Monthly sales | Chevrolet)
Bookmark and Share Feedback Print
 
ಕಾರು ತಯಾರಿಕೆ ಕಂಪೆನಿಯಾದ ಜನರಲ್ ಮೋಟಾರ್ಸ್ ಇಂಡಿಯಾ, ಫೆಬ್ರವರಿ ತಿಂಗಳ ಅವಧಿಯಲ್ಲಿ ದಾಖಲೆಯ 11,111 ಕಾರುಗಳನ್ನು ಮಾರಾಟ ಮಾಡಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಕಳೆದ ವರ್ಷದ ಫೆಬ್ರವರಿ ತಿಂಗಳ ಅವಧಿಯಲ್ಲಿ 4,921 ಕಾರುಗಳನ್ನು ಮಾರಾಟ ಮಾಡಲಾಗಿತ್ತು ಎಂದು ಜನರಲ್ ಮೋಟಾರ್ಸ್ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

1996ರಲ್ಲಿ ಕಾರು ತಯಾರಿಕೆ ಆರಂಭಿಸಿದ ಜನರಲ್ ಮೋಟಾರ್ಸ್ ಇಂಡಿಯಾ,ಮೊದಲ ಬಾರಿಗೆ ಮಾಸಿಕದ ಅವಧಿಯಲ್ಲಿ 10,000 ಕಾರುಗಳ ಮಾರಾಟದ ಗಡಿಯನ್ನು ದಾಟಿದೆ ಎಂದು ಅಮೆರಿಕ ಮೂಲದ ಜನರಲ್ ಮೋಟಾರ್ಸ್ ತಿಳಿಸಿದೆ.

ಕಂಪೆನಿಯ ಉತ್ಪನ್ನಗಳಾದ ಬೀಟ್ ಮತ್ತು ಸ್ಪಾರ್ಕ್ ಮಾಡೆಲ್ ಕಾರುಗಳ ಮಾರಾಟದಲ್ಲಿ ಏರಿಕೆಯಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಂಪೆನಿ ಫೆಬ್ರವರಿ ತಿಂಗಳ ಅವಧಿಯಲ್ಲಿ ಸ್ಪಾರ್ಕ್ ಮಾಡೆಲ್‌ನ 3,412 ಕಾರು, ಸೆಡಾನ್ ಕ್ರ್ಯೂಸ್ ಮಾಡೆಲ್‌ನ 726 ಕಾರು ಹಾಗೂ ಬೀಟ್ ಮಾಡೆಲ್‌ನ 4,431 ಕಾರುಗಳನ್ನು ಮಾರಾಟ ಮಾಡಲಾಗಿದೆ.

ಜನರಲ್ ಮೋಟಾರ್ಸ್‌ನ ಎಲ್ಲಾ ಮಾಡೆಲ್‌ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಂಡಿರುವುದು ಸಂತಸವಾಗಿದೆ. ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದ ಇತರ ಮಾಡೆಲ್‌ ಕಾರುಗಳ ಮಾರಾಟದಲ್ಲಿ ಕೂಡಾ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಭಾರತದ ಉಪಾಧ್ಯಕ್ಷ ಪಿ.ಬಲೆಂದ್ರನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ