ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂಧನ ಮಾರಾಟದಿಂದ ಪ್ರತಿನಿತ್ಯ 107ಕೋಟಿ ರೂ. ನಷ್ಟ (Indian Oil Corp|Bharat Petroleum|Hindustan Petroleum|B M Bansal)
Bookmark and Share Feedback Print
 
PTI
ದೇಶದ ಬೃಹತ್ ತೈಲ ಕಂಪೆನಿಯಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲವನ್ನು ವೆಚ್ಚದ ದರಕ್ಕಿಂತ ಕಡಿಮೆ ದರದ ಮಾರಾಟದಿಂದಾಗಿ, ಪ್ರತಿನಿತ್ಯ 107 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ನಾವು ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ, ಸೀಮೆಎಣ್ಣೆಯನ್ನು ಅಮುದು ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದರಿಂದ, ಪ್ರತಿನಿತ್ಯ 107 ಕೋಟಿ ರೂಪಾಯಿ ನಷ್ಟವನ್ನು ಎದುರಿಸುತ್ತಿದ್ದೇವೆ ಎಂದು ಇಂಡಿಯನ್ ಆಯಿಲ್ ಕಂಪೆನಿ ಮುಖ್ಯಸ್ಥ ಬಿ.ಎಂ.ಬನ್ಸಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಐಒಸಿ ಸಹೋದರಿ ಸಂಸ್ಥೆಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ ಪೆಟ್ರೋಲಿಯಂ ಸಂಸ್ಥೆಗಳು ಪ್ರತಿನಿತ್ಯ ಪೆಟ್ರೋಲ್‌ ಪ್ರತಿ ಲೀಟರ್‌ಗೆ 4.97 ರೂ, ಡೀಸೆಲ್‌ಗೆ 3.27 ಹಾಗೂ ಸೀಮೆಎಣ್ಣೆ 16.91 ರೂ. ಮತ್ತು ಅಡುಗೆ ಅನಿಲ ಪ್ರತಿ ಸಿಲೆಂಡರ್‌ಗೆ 267.39 ರೂಪಾಯಿಗಳ ನಷ್ಟದಲ್ಲಿ ಮಾರಾಟ ಮಾಡುತ್ತಿದೆ.

ವಿತ್ತಸಚಿವ ಪ್ರಣಬ್ ಮುಖರ್ಜಿ ಕಳೆದ ವಾರ, ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 2.71 ರೂ. ಹಾಗೂ ಡೀಸೆಲ್ ದರದಲ್ಲಿ 2.55 ಏರಿಕೆ ಮಾಡಿ ಅಬಕಾರಿ ಹಾಗೂ ಕಸ್ಟಮ್ಸ್‌ ತೆರಿಗೆಯ ನಂತರವೂ ತೈಲ ಸಂಸ್ಥೆಗಳು ಪ್ರತಿನಿತ್ಯ 107 ಕೋಟಿ ರೂಪಾಯಿಗಳ ನಷ್ಟವನ್ನು ಎದುರಿಸುತ್ತಿವೆ.

ಕಳೆದ 2009-10ರ ಅವಧಿಯಲ್ಲಿ ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್, ಐಒಸಿ ಸೇರಿದಂತೆ ತೈಲ ಸಂಸ್ಥೆಗಳು ಪ್ರತಿ ನಿತ್ಯ196 ಕೋಟಿ ರೂಪಾಯಿ ನಷ್ಟವನ್ನು ಎದುರಿಸುತ್ತಿದ್ದು, ವಾರ್ಷಿಕವಾಗಿ 47,400 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಬಿ.ಎಂ.ಬನ್ಸಾಲ್ ತಿಳಿಸಿದ್ದಾರೆ.

ಅಡುಗೆ ಅನಿಲ ಹಾಗೂ ಸೀಮೆಎಣ್ಣೆಯನ್ನು ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿರುವುದರಿಂದ ನಷ್ಟವನ್ನು ಒಎನ್‌ಜಿಸಿ ಮೂಲಕ 31,574 ಕೋಟಿ ರೂಪಾಯಿಗಳನ್ನು ಭರಿಸುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ಸರಕಾರ ತಮ್ಮ ಭರವಸೆಯನ್ನು ಹುಸಿಯಾಗಿಸಿದೆ. 31,574 ಕೋಟಿ ರೂಪಾಯಿಗಳಲ್ಲಿ ಕೇವಲ 11,845 ಕೋಟಿ ರೂಪಾಯಿಗಳನ್ನು ನೀಡಿದ್ದು, 19,729 ಕೋಟಿ ರೂಪಾಯಿಗಳನ್ನು ನೀಡಬೇಕಾಗಿದೆ ಎಂದರು.

ಇಂಡಿಯನ್ ಆಯಿಲ್ ಕಾರ್ಪೋರೇಶನ್ 16,000 ಕೋಟಿ ರೂಪಾಯಿ ನಷ್ಟವನ್ನು ಎದುರಿಸುತ್ತಿರುವುದರಿಂದ, ಹೊಸ ಯೋಜನೆಗಳ ಜಾರಿಗೆ ವಿಳಂಬವಾಗುತ್ತಿದೆ ಎಂದು ಮುಖ್ಯಸ್ಥ ಬಿ.ಎಂ.ಬನ್ಸಾಲ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ