ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೃಹೋಪಕರಣ ವಸ್ತುಗಳ ದರ ಹೆಚ್ಚಳ ಸಾಧ್ಯತೆ (Consumer durables| Increase prices | Consumer | Union Budget)
Bookmark and Share Feedback Print
 
ಕೇಂದ್ರ ಸರಕಾರ ಬಜೆಟ್‌ನಲ್ಲಿ ತೆರಿಗೆಯನ್ನು ಶೇ.2ರಷ್ಟು ಹೆಚ್ಚಳ ಘೋಷಿಸಿದ ಹಿನ್ನೆಲೆಯಲ್ಲಿ, ಗೃಹೋಪಕರಣ ವಸ್ತುಗಳ ತಯಾರಿಕೆ ಕಂಪೆನಿಗಳು ಕೆಲ ವಾರಗಳಲ್ಲಿ ಉತ್ಪನ್ನಗಳ ದರಗಳನ್ನು ಹೆಚ್ಚಿಸಲು ನಿರ್ಧರಿಸಿವೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಉಕ್ಕು ದರಗಳಲ್ಲಿ ಹೆಚ್ಚಳವಾಗಿದ್ದರಿಂದ ಜನೆವರಿ ತಿಂಗಳ ಅವಧಿಯಲ್ಲಿ ದರ ಏರಿಕೆ ಮಾಡಿದ್ದ ಗೃಹಪೋಕರಣ ತಯಾರಿಕೆ ಕಂಪೆನಿಗಳು ಇದೀಗ ಬಜೆಟ್‌ನಲ್ಲಿ ಅಬಕಾರಿ ತೆರಿಗೆಯನ್ನು ಶೇ10ಕ್ಕೆ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಮತ್ತೆ ದರ ಹೆಚ್ಚಳ ಮಾಡಲು ಯೋಜನೆಗಳನ್ನು ರೂಪಿಸಿವೆ.

ಆದ್ದರಿಂದ ಕನಿಷ್ಠ 280 ರೂಪಾಯಿಗಳಿಂದ ಗರಿಷ್ಠ ದರದ ವಸ್ತುಗಳಿಗೆ 15,000 ರೂಪಾಯಿಗಳವರೆಗೆ ಏರಿಕೆ ಮಾಡಲು ನಿರ್ಧರಿಸಿದೆ. ಮೈಕ್ರೋವೇವ್ ದರದಲ್ಲಿ ಏರಿಕೆ ಮಾಡುವುದಿಲ್ಲವೆಂದು ಕಂಪೆನಿಗಳ ಮೂಲಗಳು ತಿಳಿಸಿವೆ.

ಗೋದ್ರೆಜ್ ಆಂಡ್ ಬೊಯಿಸ್ ಕಂಪೆನಿ ತನ್ನ ಉತ್ಪನ್ನಗಳ ಮೇಲೆ ಎರಡನೇ ಬಾರಿಗೆ ಸರಾಸರಿ ಶೇ.2ರಷ್ಟು ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಜನೆವರಿ ತಿಂಗಳ ಅವಧಿಯಲ್ಲಿ ತನ್ನ ಉತ್ಪನ್ನಗಳ ಮೇಲೆ ಶೇ.1.5ರಷ್ಟು ಏರಿಕೆ ಮಾಡಿತ್ತು.

ಒಂದು ವೇಳೆ ಅಗತ್ಯ ವಸ್ತುಗಳ ದರಗಳಲ್ಲಿ ಮತ್ತಷ್ಟು ಏರಿಕೆಯಾದಲ್ಲಿ, ಮೂರನೇ ಬಾರಿಗೆ ದರ ಹೆಚ್ಚಳ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಕಮಲ್ ನಂದಿ ತಿಳಿಸಿದ್ದಾರೆ.

ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಮೂನ್ ಬಿ.ಶಿನ್ ಮಾತನಾಡಿ, ಕೇಂದ್ರ ಸರಕಾರ ಅಬಕಾರಿ ತೆರಿಗೆಯಲ್ಲಿ ಶೇ.2ರಷ್ಟು ಏರಿಕೆಗೊಳಿಸಿದ್ದರಿಂದ, ಸಹಜವಾಗಿ ಉತ್ಪನ್ನಗಳ ದರಗಳಲ್ಲಿ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.

ಮುಂಬರುವ ಮಾರ್ಚ್ 15 ರಿಂದ ಮೈಕ್ರೋವೇವ್‌ ದರದಲ್ಲಿ ಶೇ.1.5ರಷ್ಟು ಹಾಗೂ ರಿಫ್ರಿಜೆರೆಟೇರ್‌ ಶೇ.3.5ರಷ್ಟು ದರಗಳಲ್ಲಿ ಏರಿಕೆ ಮಾಡಲಾಗುವುದು. 2010ರಲ್ಲಿ ಸತತ ಮೂರನೇ ಬಾರಿಗೆ ಕಂಪೆನಿ ದರವನ್ನು ಹೆಚ್ಚಿಸುತ್ತಿದೆ ಎಂದು ಎಲ್‌ಜಿ ಕಂಪೆನಿಯ ಮಾರಾಟ ವಿಭಾಗದ ಮುಖ್ಯಸ್ಥ ಅಮಿತಾಬ್ ತಿವಾರಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ