ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.17.87ಕ್ಕೆ ಏರಿಕೆ ಕಂಡ ಅಹಾರ ಹಣದುಬ್ಬರ ದರ (Rise|Food price inflation|Whole sale price)
Bookmark and Share Feedback Print
 
ವಾರ್ಷಿಕ ಅಹಾರ ಹಣದುಬ್ಬರ ದರ ಫೆಬ್ರವರಿ 20ಕ್ಕೆ ವಾರಂತ್ಯಗೊಂಡಂತೆ ಶೇ.17.87ಕ್ಕೆ ಏರಿಕೆ ಕಂಡಿದೆ.ಕಳೆದ ವಾರದ ಅವಧಿಯಲ್ಲಿ ಅಹಾರ ಹಣದುಬ್ಬರ ದರ ಶೇ.17.58ಕ್ಕೆ ತಲುಪಿತ್ತು.

ಮುಂಬರುವ ತಿಂಗಳುಗಳಲ್ಲಿ ಅಹಾರ ದರಗಳು ಏರಿಕೆಯಾಗಲಿವೆ ಎನ್ನುವ ಆತಂಕದಿಂದಾಗಿ ಇಂಧನ ದರಗಳಲ್ಲಿ ಏರಿಕೆ ಮಾಡಿದ ಸರಕಾರದ ನಿರ್ಧಾರದಿಂದಾಗಿ ಅಹಾರ ಹಣದುಬ್ಬರ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಅಗತ್ಯ ವಸ್ತುಗಳ ದರಗಳಿಂದ ಕಂಗಾಲಾದ ಜನತೆಗೆ, ಇಂಧನ ದರ ಏರಿಕೆ ಸೂಕ್ತವಲ್ಲ ಎಂದು ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಹಾಗೂ ಯುಪಿಎ ಮೈತ್ರಿ ಪಕ್ಷಗಳು ಕೋಲಾಹಲ ಸೃಷ್ಟಿಸಿದ್ದವು.
ಸಂಬಂಧಿತ ಮಾಹಿತಿ ಹುಡುಕಿ