ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದಲೈಲಾಮಾರಿಂದ ಇದೀಗ ಟ್ವಿಟ್ಟರ್ ಬಳಕೆ (Dalai Lama | Tibet | spiritual leader | Twitter | Pope)
Bookmark and Share Feedback Print
 
PTI
ಪೋಪ್ ಮತ್ತು ಇತರ ಧಾರ್ಮಿಕ ನಾಯಕರು ಈಗಾಗಲೇ ಸೋಶಿಯಲ್ ನೆಟ್‌ವರ್ಕ್ ಟ್ವಿಟ್ಟರ್ ಬಳಸುತ್ತಿದ್ದು, ಟಿಬೆಟ್‌ ಧಾರ್ಮಿಕ ಗುರು ದಲೈ ಲಾಮಾ ಕೂಡಾ ಟ್ವೆಟ್ಟರ್‌ಗೆ ಸೇರ್ಪಡೆಯಾದ ವಿಶ್ವದ ಹಿರಿಯ ಧಾರ್ಮಿಕ ನಾಯಕರಾಗಿದ್ದಾರೆ.

ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಲು ದಲೈ ಲಾಮಾ ಅಮೆರಿಕದ ಪ್ರವಾಸದಲ್ಲಿದ್ದಾಗ, ಲಾಸ್ ಏಂಜಲೀಸ್‌ನಲ್ಲಿ ಸೋಶಿಯಲ್ ನೆಟ್‌ವರ್ಕ್ ಟ್ವಿಟ್ಟರ್ ಸಂಸ್ಥಾಪಕ, ಇವಾನ್ ವಿಲಿಯಮ್ಸ್ ಅವರನ್ನು ಭೇಟಿ ಮಾಡಿದ ನಂತರ ಟ್ವಿಟ್ಟರ್‌ಗೆ ಸದಸ್ಯರಾಗಿದ್ದಾರೆ

ಟಿಬೆಟಿಯನ್ ಧಾರ್ಮಿಕ ಗುರು ದಲೈ ಲಾಮಾ, ಟ್ವೆಟ್ಟರ್‌ಗೆ ಸೇರ್ಪಡೆಯಾದ ಕೇವಲ ಎರಡು ವಾರಗಳಲ್ಲಿ,140,000 ಅಭಿಮಾನಿಗಳನ್ನು ಹೊಂದಿದ್ದಾರೆ.

ದಲೈಲಾಮಾ ತಮ್ಮ ಚಟುವಟಿಕೆಗಳನ್ನು ಹಾಗೂ ಪ್ರವಾಸದ ವಿವರಗಳ ಬಗ್ಗೆ ಜನತೆಗೆ ಮಾಹಿತಿ ನೀಡಲು ಟ್ವಿಟ್ಟರ್ ಬಳಸುತ್ತಿದ್ದಾರೆ, ರಾಜಕೀಯ ಹೇಳಿಕೆಗಳನ್ನು ನೀಡುವುದರಿಂದ ದೂರವಾಗಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಚೀನಾದ ಆಧೀನದಲ್ಲಿರುವ ಟಿಬೆಟ್‌ಗೆ ಸಂಪೂರ್ಣ ಸ್ವಾಯತ್ತತೆಗೆ ಹೋರಾಟ ನಡೆಸುತ್ತಿರುವ ದಲೈ ಲಾಮಾ, ಹಲವು ದಶಕಗಳಿಂದ ನಿರಂತರ ಶ್ರಮಿಸುತ್ತಿದ್ದಾರೆ.

ಇಟಲಿಯ ರೋಮ್‌ನಲ್ಲಿರುವ ಕ್ರಿಶ್ಚಿಯನ್ ಧಾರ್ಮಿಕ ಗುರು ಪೋಪ್ ಬೆನ್‌ಡಿಕ್ಟ್, ಯೂ ಟ್ಯೂಬ್ ಹಾಗೂ ಫೇಸ್‌ಬುಕ್‌ನಲ್ಲಿ ನಿರಂತರ ಸಂದೇಶವನ್ನು ರವಾನಿಸುತ್ತಿರುತ್ತಾರೆ. ಇತ್ತೀಚೆಗೆ ದಲೈಲಾಮಾ ಕೂಡಾ ನೂತನ ತಂತ್ರಜ್ಞಾನಗಳ ಅಂತರ್ಜಾಲದ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ರವಾನಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ