ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 16 ಮಿನ್ ಟನ್ ಸಕ್ಕರೆ ಉತ್ಪಾದನೆ ಸಾಧ್ಯತೆ:ಪವಾರ್ (Sharad Pawar | Sugar output | Krishi Mela | Sugarcane productivity)
Bookmark and Share Feedback Print
 
ದೇಶದ ಪ್ರಮುಖ ರಾಜ್ಯಗಳಲ್ಲಿ ಸಕ್ಕರೆ ಉತ್ಪಾದನೆ 16 ಮಿಲಿಯನ್ ಟನ್‌ಗಳಿಗಿಂತ ಹೆಚ್ಚಿನ ಉತ್ಪಾದನೆಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಅಹಾರ ಮತ್ತು ಕೃಷಿ ಖಾತೆ ಸಚಿವ ಶರದ್ ಪವಾರ್ ಹೇಳಿದ್ದಾರೆ.

ಆದಾಗ್ಯೂ,ದೇಶಕ್ಕೆ ಅಗತ್ಯವಿರುವ ವಾರ್ಷಿಕ ಬೇಡಿಕೆಯಾದ 23 ಮಿಲಿಯನ್ ಟನ್‌ಗಳಿಗೆ ಕೊರತೆಯಾಗುತ್ತದೆ. ಅಗತ್ಯವಾದ ಹೆಚ್ಚಿನ ಸಕ್ಕರೆಯನ್ನು ಅಮುದು ಮಾಡಿಕೊಳ್ಳಲಾಗುವುದು ಎಂದು ಭಾರತೀಯ ಕೃಷಿ ಸಂಶೋಧನಾ ಕೇಂದ್ರ ಆಯೋಜಿಸಿದ ಕೃಷಿ ಮೇಳದಲ್ಲಿ ಸಚಿವ ಪವಾರ್ ತಿಳಿಸಿದ್ದಾರೆ.

ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗೆ ಸಕ್ಕರೆಯ ಸೀಜನ್‌ ಹಿನ್ನೆಲೆಯಲ್ಲಿ.ಕರ್ನಾಟಕ ಗುಜರಾತ್,ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ, ದೇಶಕ್ಕೆ ಅಗತ್ಯವಾದ ಶೇ.60ರಷ್ಟು ಸಕ್ಕರೆಯನ್ನು ಉತ್ಪಾದಿಸಲಾಗುತ್ತದೆ.

ಪ್ರಸ್ತುತ 2009-10ರ ಅವಧಿಯಲ್ಲಿ ಸಕ್ಕರೆ ಉತ್ಪಾದನೆ 16 ಮಿಲಿಯನ್ ಟನ್‌ಗಳಿಗೆ ತಲುಪುವ ಸಾಧ್ಯತೆಗಳಿವೆ. ಕಳೆದ ವರ್ಷದ ಅವಧಿಯಲ್ಲಿ 14.7 ಮಿಲಿಯನ್ ಟನ್ ಸಕ್ಕರೆ ಉತ್ಪಾದಿಸಲಾಗಿತ್ತು ಎಂದು ಕೇಂದ್ರ ಅಹಾರ ಮತ್ತು ಕೃಷಿ ಖಾತೆ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ