ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಎಸ್‌ಎನ್‌ಎಲ್‌ನಲ್ಲಿ 1ಲಕ್ಷ ಹೆಚ್ಚುವರಿ ಸಿಬ್ಬಂದಿ:ಪಿತ್ರೋಡಾ (BSNL| Employees | VRS | Bharti Airtel | Sam Pitroda| Committee)
Bookmark and Share Feedback Print
 
PTI
ಸರಕಾರಿ ಸ್ವಾಮ್ಯದ ಭಾರತ ಸಂಚಾರ್ ನಿಗಮ ಲಿಮಿಟೆಡ್‌ನಲ್ಲಿ 1ಲಕ್ಷ ಸಿಬ್ಬಂದಿಗಳು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿದ್ದು,ಅವರನ್ನು ನಿವೃತ್ತಿ ಅಥವಾ ವರ್ಗಾವಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಪ್ರಧಾನ ಮಂತ್ರಿಗಳ ಸಲಹೆಗಾರ ಹಾಗೂ ಶಿಫಾರಸು ಸಮಿತಿಯ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಬಿಎಸ್‌ಎನ್‌ಎಲ್ ಸಂಸ್ಥೆ 1ಲಕ್ಷ ಉದ್ಯೋಗಿಗಳನ್ನು ಸ್ವಯಂನಿವೃತ್ತಿ ಯೋಜನೆಯಡಿಯಲ್ಲಿ ಒಳಪಡಿಸಬೇಕು ಅಥವಾ ವರ್ಗಾವಣೆ ಮಾಡಿದಲ್ಲಿ, ಟೆಲಿಕಾಂ ಸಂಸ್ಥೆ ಚೇತರಿಕೆ ಕಾಣಲಿದೆ ಎಂದು ಪಿತ್ರೋಡಾ ನೇತೃತ್ವದ ಸಮಿತಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.

ರೈಲ್ವೆ ಇಲಾಖೆಯನ್ನು ಹೊರತುಪಡಿಸಿ, ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನಲ್ಲಿ ಸುಮಾರು 3ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು ಎರಡನೇ ಬೃಹತ್ ವಿಭಾಗವಾಗಿದೆ.ಉದಾಹರಣೆಗೆ 122 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಭಾರ್ತಿ ಏರ್‌ಟೆಲ್ ಕೇವಲ 25 ಸಾವಿರ ಉದ್ಯೋಗಿಗಳನ್ನು ಹೊಂದಿದೆ.ಭಾರ್ತಿ ಏರ್‌ಟೆಲ್ 10,500 ಗ್ರಾಹಕರಿಗೆ ಕೇವಲ ಒಬ್ಬ ಉದ್ಯೋಗಿಯನ್ನು ಮಾತ್ರ ಹೊಂದಿದೆ.

ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌‌ 65 ಮಿಲಿಯನ್ ಮೊಬೈಲ್ ಗ್ರಾಹಕರು ಹಾಗೂ 27.9 ಮಿಲಿಯನ್ ಸ್ಥಿರ ದೂರವಾಣಿ ಗ್ರಾಹಕರನ್ನು ಹೊಂದಿದ್ದು, 3ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.350 ಗ್ರಾಹಕರಿಗೆ ಒಬ್ಬ ಉದ್ಯೋಗಿಯನ್ನು ಹೊಂದಿರುವುದರಿಂದ ಉದ್ಯೋಗಿಗಳಿಗೆ ಸ್ವಯಂನಿವೃತ್ತಿಯನ್ನು ಘೋಷಿಸುವಂತೆ ಪಿತ್ರೋಡಾ ಸಮಿತಿ ಶಿಫಾರಸು ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ