ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಾಬೂಲ್ ಪ್ರಯಾಣಕ್ಕೆ ಏರಿಂಡಿಯಾ ಪೈಲಟ್‌ಗಳ ವಿರೋಧ (Air India | Pilots | Safety reasons | Kabul | Unsafe zone)
Bookmark and Share Feedback Print
 
ಸುರಕ್ಷತೆ ದೃಷ್ಟಿಯಿಂದಾಗಿ ಕಾಬೂಲ್‌ಗೆ ತೆರಳದಿರಲು ಏರಿಂಡಿಯಾ ಪೈಲಟ್‌ಗಳು ಬೆದರಿಕೆ ಒಡ್ಡಿದ್ದಾರೆ ಎಂದು ಏರಿಂಡಿಯಾ ಮೂಲಗಳು ತಿಳಿಸಿವೆ.

ವಿಮಾನ ಚಾಲನೆ ಮಾಡಲು ಸೂಕ್ತ ಮಾರ್ಗದರ್ಶಿ ಸೂತ್ರಗಳ ಕೊರತೆಯಿಂದಾಗಿ ಅಸುರಕ್ಷಿತ ಮಾರ್ಗದಲ್ಲಿ ಚಾಲನೆ ಮಾಡುವುದು ಪ್ರಯಾಣಿಕರ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಗಳಿವೆ ಎಂದು ವಾಣಿಜ್ಯ ಪೈಲಟ್‌ಗಳ ಸಂಘ ಆತಂಕ ವ್ಯಕ್ತಪಡಿಸಿದೆ.

ಒಂದು ವೇಳೆ ಅಡಳಿತ ಮಂಡಳಿಯಿಂದ ಸೂಕ್ತ ಮಾರುತ್ತರ ಬಾರದಿದ್ದಲ್ಲಿ ಪೈಲಟ್‌ಗಳು ಕಾಬೂಲ್‌ಗೆ ತೆರಳದಂತೆ ಒತ್ತಾಯ ಹೇರಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಆದರೆ, ಏರಿಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಜಾಧವ್ ಮಾತನಾಡಿ,ಏರಿಂಡಿಯಾದ ವಿಮಾನಗಳು ಅಸುರಕ್ಷಿತ ಮಾರ್ಗದಲ್ಲಿ ಪ್ರಯಾಣಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ಕಾಬೂಲ್‌ಗೆ ತೆರಳುವ ವಿಮಾನಗಳ ಪೈಲಟ್‌ಗಳ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ ಎಂದು ವಾಣಿಜ್ಯ ಪೈಲಟ್‌ಗಳ ಸಂಘ ಆರೋಪಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ