ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮದ್ಯಮ ವರ್ಗದವರಿಗಾಗಿ 'ನಮ್ಮ ಮನೆ' ಯೋಜನೆ:ಸಿಎಂ (Namma mane | Rural | Urban | Programme | Karnataka Government)
Bookmark and Share Feedback Print
 
PTI
ನಗರಗಳಲ್ಲಿ ಸಣ್ಣಪಟ್ಟಣಗಳಲ್ಲಿರುವ ಮಧ್ಯಮವರ್ಗದವರ ವಾಸದ ಸಮಸ್ಯೆಯನ್ನು ನಿವಾರಿಸಲು, ಕರ್ನಾಟಕ ಸರಕಾರ 'ನಮ್ಮ ಮನೆ' ಎನ್ನುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

2010-2011ರ ಸಾಲಿನಲ್ಲಿ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಮಧ್ಯಮ ವರ್ಗದವರಿಗಾಗಿ ವಸತಿ ಸೌಕರ್ಯವನ್ನು ಒದಗಿಸಲು 'ನಮ್ಮ ಮನೆ'ಯೋಜನೆಗಾಗಿ 920 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಾಗಿರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

2010-11 ರ ಅವಧಿಯಲ್ಲಿ ಸರಕಾರ ಪಟ್ಟಣದಲ್ಲಿರುವ ವಸತಿ ರಹಿತ ನಿರಾಶ್ರಿತರಿಗಾಗಿ ವಾಜಪೇಯ್ ಹೌಸಿಂಗ್ ಯೋಜನೆಯಡಿಯಲ್ಲಿ 50,000 ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯಿದ್ದು, ಪ್ರತಿ ಮನೆಗೆ 1.25 ಲಕ್ಷ ರೂಪಾಯಿಗಳು ವೆಚ್ಚವಾಗಲಿದೆ ಎಂದರು.

ಸುಧಾರಿತ ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ, ಪ್ರತಿ ಮನೆ ನಿರ್ಮಾಣದ ವೆಚ್ಚವನ್ನು 40,000 ರೂಪಾಯಿಗಳಿಂದ 60,000ರೂಪಾಯಿಗಳವರೆಗೆ ಹೆಚ್ಚಿಸಲಾಗುವುದು.ಫಲಾನುಭವಿಗಳು 10 ಸಾವಿರ ರೂಪಾಯಿಗಳನ್ನು ಪಾವತಿಸಿದಲ್ಲಿ, ಉಳಿದ ಮೊತ್ತಕ್ಕಾಗಿ ಬ್ಯಾಂಕ್‌ಗಳಿಂದ ಸಾಲದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ