ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೆರಿಕ ಕಂಪೆನಿಯೊಂದಿಗೆ 7 ವರ್ಷಗಳ ಒಪ್ಪಂದ:ವಿಪ್ರೋ (Wipro|Main Street | America Group)
Bookmark and Share Feedback Print
 
ದೇಶದ ಸಾಫ್ಟ್‌ವೇರ್ ರಫ್ತು ಸೇವೆಯಲ್ಲಿ ಮುಂಚೂಣಿಯಲ್ಲಿರುವ ವಿಪ್ರೋ ಸಂಸ್ಥೆ, ಅಮೆರಿಕ ಮೂಲದ ಮೇನ್ ಸ್ಟ್ರೀಟ್ ಅಮೆರಿಕಾ ಗ್ರೂಪ್‌ ಫಾರ್ ಸಾಫ್ಟ್‌ವೇಲ್ ಸಲೂಶನ್ಸ್ ಕಂಪೆನಿಯೊಂದಿಗೆ ಏಳು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮೇನ್ ಸ್ಟ್ರೀಟ್ ಕಂಪೆನಿ ವಿಪ್ರೋ ಕಂಪೆನಿಯ ಡೆವಲೆಪ್‌ಮೆಂಟ್, ಮೆಂಟೆನನ್ಸ್‌ ಮತ್ತು ಕ್ವಾಲಿಟಿ ಅಶ್ಯೂರೆನ್ಸ್‌ ವಿಭಾಗಗಳಲ್ಲಿ ಒಪ್ಪಂದವಾಗಿದೆ ಎಂದು ಬೆಂಗಳೂರು ಮೂಲದ ಸಾಫ್ಟ್‌ವೇರ್ ಕಂಪೆನಿ ವಿಪ್ರೋ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಒಪ್ಪಂದದ ಪ್ರಕಾರ, ವಿಪ್ರೋ ಸಂಸ್ಥೆ ಮೇನ್‌ಸ್ಟ್ರೀಟ್ ಕಂಪೆನಿಗೆ ಪ್ರಸ್ತುತ ಹಾಗೂ ಭವಿಷ್ಯದ ವಹಿವಾಟಿಗೆ ಅಗತ್ಯವಾದ ನೆರವು ನೀಡಲಿದೆ.ಆದರೆ ಒಪ್ಪಂದದ ಹಣಕಾಸಿನ ವ್ಯವಹಾರಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕ ಸಾಫ್ಟ್‌ವೇರ್ ರಫ್ತು ವಹಿವಾಟಿನಲ್ಲಿ ಚೇತರಿಸಿಕೊಂಡಿದ್ದರಿಂದ, ಮುಂಬರುವ ದಿನಗಳಲ್ಲಿ ಉತ್ತಮ ವಹಿವಾಟು ನಿರೀಕ್ಷಿಸಬಹುದಾಗಿದೆ ಎಂದು ವಿಪ್ರೋ ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ