ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ ಸಾಲದ ಬಡ್ಡಿ ದರ ಏರಿಕೆಯಿಲ್ಲ:ಎಸ್‌ಬಿಐ (SBI | Lending rates | Hike | ICICI Bank | HDFC Bank | Kotak Mahindra Bank)
Bookmark and Share Feedback Print
 
ದೇಶದ ಕೆಲ ಖಾಸಗಿ ಬ್ಯಾಂಕ್‌ಗಳು ಬಡ್ಡಿದರದಲ್ಲಿ ಏರಿಕೆ ಘೋಷಿಸಿದ ಹಿನ್ನೆಲೆಯಲ್ಲಿ, ಆದರೆ ಸಾರ್ವಜನಿಕ ಕ್ಷೇತ್ರದ ಪ್ರಮುಖ ಬ್ಯಾಂಕ್ ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾ ಮುಂಬರುವ ಮೂರು ತಿಂಗಳುಗಳವರೆಗೆ ಬಡ್ಡಿ ದರದಲ್ಲಿ ಏರಿಕೆಯಿಲ್ಲ ಎಂದು ಹೇಳಿಕೆ ನೀಡಿದೆ.

ಖಾಸಗಿ ಬ್ಯಾಂಕ್‌ಗಳು ಬಡ್ಡಿದರದಲ್ಲಿ ಅಲ್ಪ ಏರಿಕೆ ಘೋಷಿಸಿವೆ.ಆದರೆ ಎಸ್‌ಬಿಐ ಬ್ಯಾಂಕ್ ಮುಂಬರುವ ಮೇ-ಜೂನ್ ವರೆಗೆ ಬಡ್ಡಿ ದರದಲ್ಲಿ ಏರಿಕೆ ಘೋಷಿಸುವುದಿಲ್ಲ. ಶೀಘ್ರದಲ್ಲಿ ಬಡ್ಡಿ ದರ ಏರಿಕೆ ಮಾಡುವ ಪ್ರಸ್ತಾಪವಿಲ್ಲ ಎಂದು ಎಸ್‌‌ಬಿಐ ಮುಖ್ಯಸ್ಥ ಒ.ಪಿ.ಭಟ್ ತಿಳಿಸಿದ್ದಾರೆ.

ಸಾಲದ ಬೇಡಿಕೆಯಲ್ಲಿ ಕುಸಿತ ಹಾಗೂ ಬ್ಯಾಂಕ್‌ಗಳಲ್ಲಿ ನಗದು ಹಣದ ಹರಿವು ಹೆಚ್ಚಳವಾಗಿದ್ದರಿಂದ,ಬಡ್ಡಿದರ ಏರಿಕೆ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಭಟ್ ತಿಳಿಸಿದ್ದಾರೆ.

ವಿಶೇಷ ಸಾಲ ಯೋಜನೆಯಡಿಯಲ್ಲಿ ಮೊದಲ ವರ್ಷದ ಅವಧಿಯಲ್ಲಿ ಶೇ.8ರಷ್ಟು ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಯೋಜನೆಯನ್ನು ಮುಂದುವರಿಸುವ ಕುರಿತಂತೆ ಮಾರ್ಚ್ ಅಂತ್ಯಕ್ಕೆ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದ್ದಾರೆ.

ಬಡ್ಡಿ ದರ ಹೆಚ್ಚಳ ಘೋಷಿಸುವ ಮುನ್ನ ಸರಬರಾಜು ಹಾಗೂ ಬೇಡಿಕೆಯಂತಹ ಆರ್ಥಿಕ ಸ್ಥಿತಿಯ ವಿವರಗಳನ್ನು ಪರಿಶೀಲಿಸಬೇಕಾಗುತ್ತದೆ. ಎಸ್‌ಬಿಐ ವಿಶೇಷ ಸಾಲ ಯೋಜನೆ ಜನಪ್ರಿಯವಾಗಿದ್ದು, ಯೋಜನೆ ಆರಂಭಕ್ಕೆ ಮುನ್ನ ಎಚ್‌ಡಿಎಫ್‌ಸಿ ಸೇರಿದಂತೆ ಹಲವು ಬ್ಯಾಂಕ್‌ಗಳು ಟೀಕಿಸಿದ್ದವು.

ನಿನ್ನೆ ಖಾಸಗಿ ಬ್ಯಾಂಕ್‌ಗಳಾದ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೊಟ್ಯಾಕ್ ಮಹೀಂದ್ರಾ ವಾಹನ ಸಾಲದ ಬಡ್ಡಿದರದಲ್ಲಿ ಹೆಚ್ಚಳ ಘೋಷಿಸಿವೆ.

ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು, ಕಡಿಮೆ ಬಡ್ಡಿದರದಲ್ಲಿ ನೀಡುತ್ತಿದ್ದ ವಿಶೇಷ ಗೃಹ ಸಾಲ ಯೋಜನೆಯನ್ನು ಕೂಡಾ ರದ್ದುಗೊಳಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್‌ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್,ನೂತನ ವ್ಯವಸ್ಥೆಯನ್ನು ಜಾರಿಗೆ ತರಲು ಜುಲೈ 1ರವರೆಗೆ ಕಾಲವಕಾಶ ಕೇಳಿದ್ದರಿಂದ ಆರ್‌ಬಿಐ ಸಮ್ಮತಿಸಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ