ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಿಗರೇಟು ದರ ಏರಿಕೆ ಸ್ವಾಗತಾರ್ಹ:ಐಟಿಸಿ (Cigarette|Budget | ITC | Gold Flake)
Bookmark and Share Feedback Print
 
2010-11ರ ಸಾಲಿನ ಬಜೆಟ್‌ನಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ತೆರಿಗೆಯಲ್ಲಿ ಹೆಚ್ಚಳ ಘೋಷಿಸಿದ್ದರಿಂದ ಸಿಗರೇಟು ದರದಲ್ಲಿ ಏರಿಕೆ ಮಾಡಿರುವುದು ಸ್ವಾಗತಾರ್ಹಎಂದು ಸಿಗರೇಟು ಉತ್ಪಾದಕ ಸಂಸ್ಥೆಯಾದ ಐಟಿಸಿ ಲಿಮಿಟೆಡ್ ತಿಳಿಸಿದೆ.

ಬಜೆಟ್ ಮಂಡನೆಯಲ್ಲಿ ಸಿಗರೇಟು ದರ ಏರಿಕೆ ಘೋಷಿಸಿರುವುದು ಸ್ವಾಗತಾರ್ಹವೆಂದು ಎಂದು ಐಟಿಸಿ ವಕ್ತಾರರಾದ ನಜೀಬ್ ಆರಿಫ್ ಹೇಳಿದ್ದಾರೆ.

ಬಜೆಟ್ ಮಂಡನೆಗೆ ಮುನ್ನ ತಂಬಾಕು ಅಬಕಾರಿ ತೆರಿಗೆ ಶೇ.190ರಷ್ಟಾಗಿತ್ತು. ಆದರೆ ಬಜೆಟ್ ಮಂಡನೆಯ ನಂತರ ಮತ್ತೆ ಶೇ.17ರಷ್ಟು ಹೆಚ್ಚಳವಾಗಿದೆ ಎಂದು ಐಟಿಸಿ ಮೂಲಗಳು ತಿಳಿಸಿವೆ.

ಆದರೆ, ಕಂಪೆನಿ ಇಲ್ಲಿಯವರೆಗೆ ಸಿಗರೇಟು ದರದಲ್ಲಿ ಹೆಚ್ಚಳ ಘೋಷಿಸಿಲ್ಲ. ಹಿಂದಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಿಗರೇಟು ದರಗಳಲ್ಲಿ ಏರಿಕೆಯಾಗಲಿದೆ ಎಂದು ಆರಿಫ್ ತಿಳಿಸಿದ್ದಾರೆ.

ಏತನ್ಮಧ್ಯೆ, ಕೋಲ್ಕತಾ ಸೆಂಟ್ರಲ್‌ನಲ್ಲಿರುವ ಸಿಗರೇಟು ಡೀಲರ್‌ಗಳು, ದರ ಏರಿಕೆ ಘೋಷಣೆಯಿಂದಾಗಿ ಗೋಲ್ಡ್‌ಫ್ಲ್ಯಾಕ್‌ನಂತಹ ಬ್ರ್ಯಾಂಡ್‌ಗಳ ಸಂಗ್ರಹದ ಕೊರತೆ ಎದುರಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ