ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಫ್ತು ವಹಿವಾಟು ಚೇತರಿಕೆಗೆ ಕಾಲಾವಕಾಶ ಅಗತ್ಯ:ಚೀನಾ (China, Exports | Asian powerhouse | Chen Deming | Beijing)
Bookmark and Share Feedback Print
 
ರಫ್ತು ವಹಿವಾಟು ಪೂರ್ವ ಆರ್ಥಿಕ ಬಿಕ್ಕಟ್ಟಿನ ಹಂತಕ್ಕೆ ಬರಲು ಸುಮಾರು ಮೂರು ವರ್ಷಗಳ ಕಾಲವಕಾಶ ಅಗತ್ಯವಿದೆ. ಪ್ರಸ್ತುತ ದೇಶಿಯ ವಹಿವಾಟಿನತ್ತ ಗಮನಹರಿಸಲಾಗುತ್ತಿದೆ ಎಂದು ಚೀನಾ ವಿದೇಶಾಂಗ ವ್ಯವಹಾರ ಮೂಲಗಳು ತಿಳಿಸಿವೆ.

ನಮ್ಮ ರಫ್ತು ವಹಿವಾಟು ಇದೀಗ ಚೇತರಿಸಿಕೊಳ್ಳುತ್ತಿವೆ. ಸಂಪೂರ್ಣವಾಗಿ ಸುಸ್ಥಿತಿಗೆ ತಲುಪಲು ಸುಮಾರು ಎರಡರಿಂದ ಮೂರು ವರ್ಷಗಳ ಸಮಯ ಅಗತ್ಯವಾಗಿದೆ ಎಂದು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ವಾರ್ಷಿಕ ಸಂಸದೀಯ ಸಭೆಯಲ್ಲಿ ವಾಣಿಜ್ಯ ಸಚಿವ ಚೆನ್ ಡೆಮಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ 2008ರಲ್ಲಿ ಜಾಗತಿಕ ಆರ್ಥಿಕ ಕುಸಿತ ಎದುರಾಗಿ ಬೇಡಿಕೆ ಕುಸಿತದಿಂದಾಗಿ ಚೀನಾದ ರಫ್ತು ವಹಿವಾಟಿನಲ್ಲಿ ಇಳಿಕೆ ಕಂಡಿತ್ತು.

ಚೀನಾದ ಸರಕಾರ 2008ರ ಅಂತ್ಯಕ್ಕೆ ಜಾಗತಿಕ ಆರ್ಥಿಕ ಕುಸಿತದಿಂದ ದೇಶದ ಮೇಲಾದ ಆರ್ಥಿಕ ಪರಿಣಾಮಗಳನ್ನು ನಿಯಂತ್ರಿಸಲು, 586 ಬಿಲಿಯನ್ ಡಾಲರ್‌ಗಳ ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಿ ಕೈಗಾರಿಕೋದ್ಯಮದ ಚೇತರಿಕೆಗೆ ಕಾರಣವಾಗಿತ್ತು.

ಕಳೆದ 2009ರಲ್ಲಿ ರಫ್ತು ವಹಿವಾಟಿನಲ್ಲಿ ಶೇ.16ರಷ್ಟು ಕುಸಿತವಾಗಿ 1.2ಟ್ರಿಲಿಯನ್ ಡಾಲರ್‌ಗಳಿಗೆ ಇಳಿಕೆ ಕಂಡಿತ್ತು. ಅಮುದು ವಹಿವಾಟಿನಲ್ಲಿ ಶೇ.11.2ರಷ್ಟು ಇಳಿಕೆಯಾಗಿ 1 ಟ್ರಿಲಿಯನ್ ಡಾಲರ್‌ಗಳಿಗೆ ಕುಸಿದಿತ್ತು.

ಸುಮಾರು 13 ತಿಂಗಳ ನಂತರ ಕಳೆದ ಡಿಸೆಂಬರ್ ತಿಂಗಳ ಅವಧಿಯಲ್ಲಿ ರಫ್ತು ವಹಿವಾಟು ಚೇತರಿಸಿಕೊಂಡಿದ್ದು,ರಫ್ತು ವಹಿವಾಟಿನಲ್ಲಿ ಜರ್ಮನಿಯನ್ನು ಹಿಂದಕ್ಕೆ ತಳ್ಳಿದ ಚೀನಾ ಜಾಗತಿಕ ರಫ್ತು ವಹಿವಾಟಿನಲ್ಲಿ ಅಗ್ರಸ್ಥಾನ ಪಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ