ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾಸ್ಟೀಲ್ ವಹಿವಾಟಿನಲ್ಲಿ ಶೇ.22ರಷ್ಟು ಹೆಚ್ಚಳ (Tata Steel | Sales | Products | Crude steel)
Bookmark and Share Feedback Print
 
ಉಕ್ಕು ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಏಪ್ರಿಲ್‌ನಿಂದ ಫೆಬ್ರವರಿ ತಿಂಗಳ ಅವಧಿಯ ಉಕ್ಕು ಮಾರಾಟದಲ್ಲಿ ಶೇ.22ರಷ್ಟು ಏರಿಕೆಯಾಗಿದೆ ಎಂದು ಟಾಟಾ ಸ್ಟೀಲ್‌ ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಫೆಬ್ರವರಿ 2010ರ ಅವಧಿಯವರೆಗೆ 5.54ಮಿಲಿಯನ್ ಟನ್ ಉಕ್ಕು ಮಾರಾಟ ಮಾಡಿ, ಮಾರಾಟದಲ್ಲಿ ಶೇ.22ರಷ್ಟು ಏರಿಕೆಯಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

2008-09ರ ಏಪ್ರಿಲ್‌ನಿಂದ ಫೆಬ್ರವರಿ ತಿಂಗಳ ಅವಧಿಯಲ್ಲಿ 5.86 ಮಿಲಿಯನ್ ಟನ್ ಉಕ್ಕು ಮಾರಾಟ ಮಾಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಶೇ.22ರಷ್ಟು ಚೇತರಿಕೆ ಕಂಡಿದ್ದರಿಂದ ಸುಸ್ಥಿತಿಗೆ ಮರಳುತ್ತಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಂಪೆನಿಯ ಉಕ್ಕು ಉತ್ಪಾದನೆಯಲ್ಲಿ ಶೇ.17ರಷ್ಟು ಏರಿಕೆಯಾಗಿದ್ದು, ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಶೇ.18ರಷ್ಟು ಏರಿಕೆಯಾಗಿ 6.60 ಮಿಲಿಯನ್ ಟನ್‌ಗಳಿಗೆ ತಲುಪಿದೆ.

ಉಕ್ಕು ಬೇಡಿಕೆಯಲ್ಲಿ ಏರಿಕೆಯಾಗಿದ್ದರಿಂದ, ಮುಂಬರುವ ದಿನಗಳಲ್ಲಿ ಉತ್ತಮ ವಹಿವಾಟಿನ ನಿರೀಕ್ಷೆಯಿದೆ ಎಂದು ಟಾಟಾ ಸ್ಟೀಲ್ ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ