ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್ಥಿಕತೆ ಶೀಘ್ರದಲ್ಲಿ ಸುಸ್ಥಿತಿಗೆ ಮರಳಲಿದೆ:ಶರ್ಮಾ (Anand Sharma | Economic recovery | Stimulus packages | world economy)
Bookmark and Share Feedback Print
 
ವಿಶ್ವದಾದ್ಯಂತ ಹಲವಾರು ರಾಷ್ಟ್ರಗಳು ಹಾಗೂ ರಾಜಕೀಯ ನಾಯಕರು ಉತ್ತೇಜನ ಪ್ಯಾಕೇಜ್‌ಗಳಿಗೆ ಆದ್ಯತೆ ನೀಡಿರುವುದರಿಂದ, ಮುಂಬರುವ ದಿನಗಳಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.

ವಿಶ್ವದ ಹಲವಾರು ರಾಷ್ಟ್ರಗಳು ಉತ್ತೇಜನ ಪ್ಯಾಕೇಜ್‌ಗಳಿಂದಾಗಿ ಜಾಗತಿಕ ಆರ್ಥಿಕತೆ ಚೇತರಿಸಿಕೊಂಡಿದ್ದು,ಮುಂಬರುವ ದಿನಗಳಲ್ಲಿ ಎಚ್ಚರಿಕೆಯಿಂದ ಆರ್ಥಿಕ ನೀತಿಗಳನ್ನು ರೂಪಿಸಬೇಕಾಗಿದೆ ಎಂದು ದೆಹಲಿಯಲ್ಲಿ ಆಯೋಜಿಸಲಾದ ರೋಟರಿ ಕ್ಲಬ್‌‌ ಸಮಾರಂಭದಲ್ಲಿ ತಿಳಿಸಿದ್ದಾರೆ.

ಕಳೆದ 60 ವರ್ಷಗಳಿಂದ ಕಂಡರಿಯದಿದ್ದ ಜಾಗತಿಕ ಆರ್ಥಿಕ ಕುಸಿತದಿಂದ ಇದೀಗ ಹೊರಬರುತ್ತಿರುವ ಸಂಕೇತಗಳು ಕಂಡುಬರುತ್ತಿವೆ ಎಂದು ಸಚಿವ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಪ್ರಕಾರ, 2010ರಲ್ಲಿ ವಿಶ್ವಆರ್ಥಿಕತೆಯಲ್ಲಿ ಶೇ.3.9ರಷ್ಟು ವಿಸ್ತರಣೆಯಾಗಲಿದೆ.ಮುಂಬರುವ 2011ರಲ್ಲಿ ಶೇ.4.3ಕ್ಕೆ ಏರಿಕೆ ಕಾಣಲಿದೆ ಎಂದು ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ