ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್‌ಬಿಐ ಬಡ್ಡಿ ದರ ಏರಿಕೆ ಕೈಬಿಡಲಿ:ಎಫ್‌ಐಸಿಸಿಐ (FICCI | RBI | Monetary policy | Rajan Mittal | Manmohan Singh)
Bookmark and Share Feedback Print
 
ಹಣದುಬ್ಬರ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರ ಏರಿಕೆ ಸೇರಿದಂತೆ ಆರ್ಥಿಕ ನೀತಿಗಳಲ್ಲಿ ಕಾಠಿಣ್ಯತೆಯನ್ನು ಕೈಬಿಡಬೇಕು ಎಂದು ಕೈಗಾರಿಕೋದ್ಯಮ ಸಂಘಟನೆಯಾದ ಎಫ್‌ಐಸಿಸಿಐ ಮನವಿ ಮಾಡಿದೆ.

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಆರ್ಥಿಕ ವೃದ್ಧಿ ದರ ಶೇ.8ಕ್ಕೆ ತಲುಪುವ ನಿಟ್ಟಿನಲ್ಲಿ ಯೋಜನೆಗಳನ್ನು ಪ್ರಧಾನಮಂತ್ರಿ ರೂಪಿಸಿದ್ದರಿಂದ, ಆರ್‌ಬಿಐ ಕೂಡಾ ಬಡ್ಡಿ ದರ ಏರಿಕೆಯನ್ನು ಕೈಬಿಡುವುದು ಅಗತ್ಯವಾಗಿದೆ ಎಂದು ಎಫ್‌ಐಸಿಸಿಐ ಅಧ್ಯಕ್ಷ ರಂಜನ್ ಮಿತ್ತಲ್ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಸರಕಾರ ಕಠಿಣ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿದಲ್ಲಿ, ಬಡಜನತೆಯ ಜೀವನಕ್ಕೆ ತೊಂದರೆಯಾಗಿ, ಉದ್ಯೋಗಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸಂಸತ್ತಿನಲ್ಲಿ ಹೇಳಿದ್ದಾರೆ.

ಮುಂದಿನ ಆರ್ಥಿಕ ಸಾಲಿನಲ್ಲಿ ಆರ್ಥಿಕ ನೀತಿಗಳನ್ನು ಘೋಷಿಸುವಾಗ, ಆರ್ಥಿಕ ನೀತಿಗಳಲ್ಲಿ ಕಠಿಣ ನಿಲುವುಗಳನ್ನು ದೂರವಿಡಬೇಕಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮನವಿ ಮಾಡಲಾಗಿರುವುದಾಗಿ ಎಫ್‌ಐಸಿಸಿಐ ಅಧ್ಯಕ್ಷ ಮಿತ್ತಲ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ