ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಸ್‌ಎಫ್‌ಐಒಗೆ ಶಾಶ್ವತ ಸಿಬ್ಬಂದಿ: ಸರಕಾರ ಚಿಂತನೆ (SFIO | Permanent cadre | Government | Satyam fraud | Salman Khurshid)
Bookmark and Share Feedback Print
 
ಸತ್ಯಂ ಕಂಪ್ಯೂಟರ್‌ ಸರ್ವಿಸಸ್‌ನ ಬಹುಕೋಟಿ ಹಗರಣದ ತನಿಖೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ ಗಂಭೀರ ಅಪರಾಧ ಪತ್ತೆ ದಳಕ್ಕೆ ಪ್ರತ್ಯೇಕ ತಂಡವನ್ನು ರಚಿಸಲು ಸರಕಾರದ ಪರಿಗಣನೆಯಲ್ಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಕಾರ್ಪೋರೇಟ್ ಕಂಪೆನಿಗಳ ವಂಚನೆಯನ್ನು ಬಯಲಿಗೆಳೆಯಲು ಗಂಭೀರ ಅಪರಾಧ ಪತ್ತೆ ದಳದ ಪ್ರತ್ಯೇಕ ವಿಭಾಗವನ್ನು ಸೃಷ್ಟಿಸಲು ಕಾರ್ಪೋರೇಟ್ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಸಮ್ಮತಿ ಸೂಚಿಸಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ,ಗಂಭೀರ ಅಪರಾಧ ಪತ್ತೆ ದಳಕ್ಕೆ ಇತರ ವಿಭಾಗಗಳ ಹಾಗೂ ಸಚಿವಾಲಯಗಳ ಅಧಿಕಾರಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಗಂಭೀರ ಅಪರಾಧ ಪತ್ತೆ ದಳದ ಅಧಿಕಾರಿಗಳು ಸರಕಾರಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದು, ಶೇ.100ರಷ್ಟು ಅಡಳಿತ ಸಿಬ್ಬಂದಿಯನ್ನು ಖಾಯಾಂಗೊಳಿಸಬೇಕು ಹಾಗೂ ತನಿಖೆ ಮತ್ತು ಕಾನೂನು ವಿಭಾಗದ ಹುದ್ದೆಗಳಲ್ಲಿ ಶೇ.50ರಷ್ಟು ಖಾಯಾಂಗೊಳಿಸಬೇಕು ಎಂದು ಮನವಿ ಸಲ್ಲಿಸಿದೆ.

ಇತರ ವಿಭಾಗಗಳಿಂದ ಹಾಗೂ ಸಚಿವಾಲಯಗಳಿಂದ ನಿಯೋಜನೆಗೊಂಡಿರುವ ಅಧಿಕಾರಿಗಳು ತಮ್ಮ ಅವಧಿ ಮುಕ್ತಾಯವಾದ ನಂತರ, ತಮ್ಮ ಇಲಾಖೆಗೆ ಮರಳುವುದರಿಂದ ಕೈಗೆತ್ತಿಕೊಂಡ ಕಾರ್ಯಗಳು ಅರ್ಧಕ್ಕೆ ಸ್ಥಗಿತಗೊಳ್ಳುತ್ತವೆ. 130 ಹುದ್ದೆಗಳಿಗೆ ಅನುಮತಿ ನೀಡಲಾಗಿದ್ದು,80 ಹುದ್ದೆಗಳು ಖಾಲಿಯಾಗಿ ಉಳಿದಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಸೆಸಾ ಗೋವಾ ಮತ್ತು ಆಸ್ಟ್ರುಲ್ ಕೋಕ್ ಪ್ರಕರಣಗಳು ಸೇರಿದಂತೆ ಇಲ್ಲಿಯವರೆಗೆ 22 ಪ್ರಕರಣಗಳು ನೆನೆಗುದಿಯಲ್ಲಿವೆ. ಕಳೆದ ವರ್ಷದ ಜನೆವರಿ ತಿಂಗಳ ಅವಧಿಯಲ್ಲಿ ಬಹಿರಂಗವಾದ10 ಸಾವಿರ ಕೋಟಿಯ ಸತ್ಯಂ ಹಗರಣದ ತನಿಖೆ ಮುಂದುವರಿದಿದೆ.
ಸಂಬಂಧಿತ ಮಾಹಿತಿ ಹುಡುಕಿ