ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಾಜ್ಯದಲ್ಲಿ ಉಕ್ಕು ಘಟಕ ಸ್ಥಾಪನೆಗೆ ಎನ್‌ಎಂಡಿಸಿ ಯೋಜನೆ (NMDC | Steel plant | Karnataka | Chhattisgarh | Mining)
Bookmark and Share Feedback Print
 
ಗಣಿಗಾರಿಕೆ ವಹಿವಾಟು ನಡೆಸುವ ನ್ಯಾಷನಲ್ ಮಿನರಲ್ ಡೆವಲೆಪ್‌ಮೆಂಟ್ ಕಾರ್ಪೋರೇಶನ್ ಲಿಮಿಟೆಡ್(ಎನ್‌ಎಂಡಿಸಿ)ಕಂಪೆನಿ ರಾಜ್ಯದಲ್ಲಿ ವಾರ್ಷಿಕವಾಗಿ ಎರಡು ಮಿಲಿಯನ್ ಟನ್ ಸಾಮರ್ಥ್ಯದ ಉಕ್ಕು ಘಟಕವನ್ನು ಸ್ಥಾಪಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಕ್ಕು ಘಟಕ ಸ್ಥಾಪನೆಗಾಗಿ ಕರ್ನಾಟಕ ಸರಕಾರ 2500 ಎಕರೆ ಭೂಮಿಯನ್ನು ನೀಡುವ ಭರವಸೆ ನೀಡಿದ್ದು,ಚತ್ತಿಸ್‌ಗಢ್‌ನಲ್ಲಿ ವಾರ್ಷಿಕವಾಗಿ ಮೂರು ಮಿಲಿಯನ್ ಟನ್ ಸಾಮರ್ಥ್ಯದ ಉಕ್ಕು ಘಟಕ ಸ್ಥಾಪನೆಯ ನಂತರ ರಾಜ್ಯದಲ್ಲಿ ಎರಡನೇ ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದು ಕಂಪೆನಿಯ ಜಂಟಿ ಪ್ರಧಾನ ವ್ಯವಸ್ಥಾಪಕ ಎನ್‌.ಶ್ರೀನಿವಾಸನ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಉಕ್ಕು ಘಟನೆ ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ತಾಂತ್ರಿಕ ಕ್ರಮಗಳನ್ನು ಪೂರ್ಣಗೊಳಿಸಲು ಸಂದರ್ಶಕರೊಬ್ಬರನ್ನು ನೇಮಿಸಲಾಗುವುದು. ಕಟ್ಟಡ ನಿರ್ಮಾಣದ ನಂತರ ಇತರ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ವಿವರಣೆ ನೀಡಿದ್ದಾರೆ.

ಉಕ್ಕು ಘಟಕ ಸ್ಥಾಪನೆಗೆ ಹೂಡಿಕೆ ಕೊರತೆಯಾದಲ್ಲಿ ಸಾಲ ಅಥವಾ ಶೇರು ಆಧಾರಿತ ಮೊತ್ತದ ಸಾಲವನ್ನು ಪಡೆಯುವುದಾಗಿ ತಿಳಿಸಿದ್ದಾರೆ.

ಚತ್ಚಿಸ್ ಗಢ್ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ಉಕ್ಕು ಘಟಕವನ್ನು 995 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು,ನೀರು ಮತ್ತು ವಿದ್ಯುತ್ ಸೌಲಭ್ಯಗಳನ್ನು ಒದಗಿಸುವಂತೆ ಕೋರಲಾಗಿದೆ ಎಂದು ಕಂಪೆನಿಯ ಜಂಟಿ ಪ್ರಧಾನ ವ್ಯವಸ್ಥಾಪಕ ಎನ್‌.ಶ್ರೀನಿವಾಸನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ